ಆಟೋ ಮೇಲೆ ಆನೆಯ ಪ್ರತಾಪ – ಒದ್ದ ರಭಸಕ್ಕೆ 100 ಮೀ. ದೂರ ಹೋದ ಆಟೋ

ಮಡಿಕೇರಿ: ಕೊಡಗಿನಲ್ಲಿ ಕಾಡಾನೆ ಒಂದು ಆಟೋ ಮೇಲೆ ತನ್ನ ಪ್ರತಾಪ ತೋರಿಸಿದೆ.

ಪಾಲಿಬೆಟ್ಟ ರಸ್ತೆಯ ಆಲಿತೋಪು ಎಸ್ಟೇಟ್ ಬಳಿ ಈ ಘಟನೆ ನಡೆದಿದೆ. ಆಟೋವೊಂದು ಪ್ರಯಾಣಿಕರನ್ನು ತುಂಬಿಸಿಕೊಂಡು ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಸಮೀಪದ ಬಜೆಗೊಲ್ಲಿಯಲ್ಲಿ ಚಲಿಸುತ್ತಿತ್ತು. ಈ ವೇಳೆ ಆನೆಯೊಂದು ರಸ್ತೆಗೆ ಬಂದು ಆಟೋವನ್ನು ತಡೆದು ಪುಂಡಾಟ ಮೆರೆದಿದೆ. ಪ್ರಯಾಣಿಕರಿದ್ದರು ಬಿಡದೆ ಆನೆ ಆಟೋಗೆ ಒದ್ದಿದೆ. ಆನೆ ಒದ್ದ ರಭಸಕ್ಕೆ ಆಟೋ 100 ಮೀಟರ್ ದೂರ ಹೋಗಿ ಬಿದ್ದಿದೆ.

ಈ ದಾಳಿ ವೇಳೆ ಆಟೋ ಚಾಲಕ ಮಹ್ಮದ್, ಪ್ರಯಾಣಿಕರಾದ ಸೇತುರಾಂ ಮತ್ತು ಬಾಲಕೃಷ್ಣ ಗಾಬರಿಯಿಂದ ಓಡಿಹೋಗಿ ಪಾರಾಗಿದ್ದಾರೆ. ಇತ್ತ ಒಂಟಿ ಸಲಗದ ರೋಷಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *