ವಿಡಿಯೋ: ಬಸ್ ಚಾರ್ಜ್ ಕೊಡಪ್ಪ ಅಂತ ಕೇಳಿದ್ದಕ್ಕೆ ಡ್ರೈವರ್ ಕಪಾಳಕ್ಕೆ ಹೊಡೆದು ಕೆನ್ನೆ ಕಚ್ಚಿದ ಪ್ರಯಾಣಿಕ

ಬೀಜಿಂಗ್: ಬಸ್‍ನಲ್ಲಿ ಪ್ರಯಾಣಿಸಿದ ನಂತರ ಹಣ ಪಾವತಿ ಮಾಡುವಂತೆ ಕೇಳಿದ್ದಕ್ಕೆ ಪ್ರಯಾಣಿಕನೊಬ್ಬ ಚಾಲಕನ ಕಪಾಳಕ್ಕೆ ಹೊಡೆದು, ಕೆನ್ನೆ ಕಚ್ಚಿ ಗಾಯಗೊಳಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.

ಇಲ್ಲಿನ ಶಾಂಗ್ಸಿಯ ಕ್ಸಿಯಾನ್‍ನಲ್ಲಿ ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಆತನ ಇಬ್ಬರು ಸ್ನೇಹಿತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ 102ನೇ ಸಂಖ್ಯೆಯ ಬಸ್‍ನಲ್ಲಿ ಈ ಮೂವರು ಪ್ರಯಾಣಿಸಿದ್ದರು.

ಟ್ರಾವೆಲ್ ಕಾರ್ಡ್ ಉಜ್ಜಿ ಪ್ರಯಾಣದ ಹಣ ಪಾವತಿಸುವಂತೆ ನೆನಪಿಸಿದೆ ಅಷ್ಟೇ. ಅಷ್ಟಕ್ಕೇ ಆತ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಲು ಶುರುಮಾಡಿದ. ಬಸ್ ನಿಲ್ಲಿಸದೇ ನನಗೆ ಬೇರೆ ದಾರಿ ಇರಲಿಲ್ಲ ಎಂದು ಚಾಲಕ ಝಾಂಗ್ ಇಲ್ಲಿನ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಆ ಪ್ರಯಾಣಿಕ ಕಪಾಳಕ್ಕೆ ಹೊಡೆದರೂ ಚಾಲಕ ಝಾಂಗ್ ಪ್ರತಿಕ್ರಿಯಿಸದೇ ಸುಮ್ಮನಿದ್ದರು. ಆದ್ರೆ ನಂತರ ಪ್ರಯಾಣಿಕ ಮುಂದೆ ಬಂದು ಝಾಂಗ್ ಅವರ ಕೆನ್ನೆ ಕಚ್ಚಿದ್ದಾನೆ. ಈ ಮೂವರು ಅಲ್ಲಿಂದ ಪರಾರಿಯಗದಂತೆ ತಡೆಯಲೆತ್ನಿಸಿದ ಇತರೆ ಪ್ರಯಾಣಿಕರ ಮೇಲೂ ದಾಳಿ ಮಾಡಿದ್ರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಕೆನ್ನೆ ಮೇಲೆ ಗಾಯವಾಗಿದ್ದರಿಂದ ಚಾಲಕ ಝಾಂಗ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ವರದಿಯಾಗಿದೆ.

https://www.youtube.com/watch?v=N79TrMe0ELM

Comments

Leave a Reply

Your email address will not be published. Required fields are marked *