ಬೆಂಗಳೂರು: ಪ್ರಯಾಣಿಕನೊಬ್ಬನ ಬ್ಯಾಗ್‍ನಲ್ಲಿ ಸುಮಾರು ಎರಡುವರೆ ಕೆ.ಜಿ ಗಾಂಜಾ ಪತ್ತೆಯಾಗಿರುವ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ಕೇರಳ ಮೂಲದ ಪೂಲಪರಂಬಿ ಹಂಸ ಮೊಹಮ್ಮದ್ (31) ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಆರೋಪಿ ಮೊಹಮೊದ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾಗೆ ಪ್ರಯಾಣ ಮಾಡಲು ಬಂದಿದ್ದ. ಸ್ಕ್ರೀನಿಂಗ್‍ನಲ್ಲಿ ಹ್ಯಾಂಡ್ ಬ್ಯಾಗ್ ಪರಿಶೀಲನೆ ಮಾಡುತ್ತಿದ್ದಾಗ ಆತನ ಬ್ಯಾಗ್‍ನಲ್ಲಿ ಸುಮಾರು ಎರಡೂವರೆ ಕೆ.ಜಿ ಗಾಂಜಾ ಪತ್ತೆಯಾಗಿದೆ.

ಏರ್ ಪೋರ್ಟ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಗಾಂಜಾವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಹೊಲದಲ್ಲಿ ಬೆಳೆದಿದ್ದ ಗಾಂಜಾದೊಂದಿಗೆ ರೈತ ಅರೆಸ್ಟ್ https://t.co/azuZc4G7iT#Karwar #Ganja #Farmer #Arrest pic.twitter.com/8HzjVIgbuQ
— PublicTV (@publictvnews) October 18, 2017





Leave a Reply