Paris Olympics| ಭಾರತಕ್ಕೆ ಆಘಾತ – ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹ

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತ ಎದುರಾಗಿದ್ದು ವಿನೇಶ್ ಫೋಗಟ್ (Vinesh Phogat) ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದ್ದು, ಕುಸ್ತಿ ಫೈನಲ್‌ ಸ್ಪರ್ಧೆಯಿಂದ ಅನರ್ಹರಾಗಿದ್ದಾರೆ.

ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ವಿನೇಶ್‌ ಫೋಗಟ್‌ ಫೈನಲ್‌ ತಲುಪಿದ್ದರು. ಆದರೆ ಹೆಚ್ಚಿನ ತೂಕ ಹೊಂದಿದ ಹಿನ್ನೆಲೆಯಲ್ಲಿ ಫೋಗಟ್‌ ಫೈನಲ್‌ನಿಂದ ಅನರ್ಹರಾಗಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ ನಡೆದ ಕುಸ್ತಿ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಟ್ ಪಾತ್ರರಾಗಿದ್ದರು.


ಅನರ್ಹ ಯಾಕೆ?
ವಿನೇಶ್‌ ಫೋಗಟ್‌ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಗರಿಷ್ಟ 100 ಗ್ರಾಂ ಹೆಚ್ಚು ತೂಕ ಹೊಂದಲು ಅವಕಾಶವಿದೆ. ಆದರೆ ಇಂದು ದೇಹದ ತೂಕ 150 ಗ್ರಾಂ ಜಾಸ್ತಿ ಇದ್ದ ಪರಿಣಾಮ ಅವರನ್ನು ಫೈನಲ್‌ನಿಂದ ಅನರ್ಹ ಮಾಡಲಾಗಿದೆ ಎಂದು ವರದಿಯಾಗಿದೆ.