ಹಾಟ್ ಬಿಕಿನಿಯಲ್ಲಿ ಕೂಲ್ ಕೂಲ್ ಆಗಿ ಕಂಡ ಪರಿಣಿತಿ ಚೋಪ್ರಾ

ಮುಂಬೈ: ಸಿನಿಮಾ ಶೂಟಿಂಗ್ ನಿಂದ ವಿರಾಮ ಪಡೆದಿರುವ ನಟಿ ಪರಿಣಿತಿ ಚೋಪ್ರಾ ಸದ್ಯ ರಜಾ ಮೂಡ್‍ನಲ್ಲಿದ್ದು, ಈ ವೇಳೆ ಕಪ್ಪು ಬಣ್ಣದ ಬಿಕಿನಿ ಧರಿಸಿ ಸ್ವಿಮ್ ಮಾಡುತ್ತಿರುವ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ನಿರಂತರವಾಗಿ ಅಭಿಮಾನಿಗಳೊಂದಿಗೆ ಟಚ್‍ನಲ್ಲಿರುವ ಪರಿಣಿತಿ ಚೋಪ್ರಾರ ಹಾಟ್ ಬಿಕಿನಿ ಫೋಟೋ ಸಖತ್ ವೈರಲ್ ಆಗಿದ್ದು, ಕೆಲ ಅಭಿಮಾನಿಗಳು ಕಮೆಂಟ್ ಮಾಡಿ ಹೊಗಳಿಕೆ ನೀಡಿದ್ದಾರೆ. ಕಪ್ಪು ಬಣ್ಣದ ಬಿಕಿನಿ ತೊಟ್ಟ ಚೋಪ್ರಾ ಸ್ವಿಮಿಂಗ್ ಪೂಲ್‍ನಲ್ಲಿ ಕೂಲ್ ಆಗಿ ಸ್ವಿಮ್ ಮಾಡುತ್ತಿದ್ದರೆ, ನೋಡುಗರು ಹಾಟ್ ಆಗುವಂತೆ ಮಾಡಿದೆ. ಈ ಫೋಟೋಗೆ ಹಲವರು ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಲುಕ್ ಸೂಪರ್ ಎಂದು ಹಲವರು ಹೊಗಳಿಕೆ ನೀಡಿದರೆ, ಮತ್ತು ಕೆಲವರು ನಿಮ್ಮ ದೇಹ ಚೆನ್ನಾಗಿಲ್ಲ, ಪ್ರಚಾರಕ್ಕಾಗಿ ಅಗ್ಗದ ಮಾರ್ಗ ಹಿಡಿಯದಂತೆ ಸಲಹೆ ನೀಡಿದ್ದಾರೆ.

https://www.instagram.com/p/BpYwvrqgjwA/?taken-by=parineetichopra

ಬಹುದಿನಗಳ ಬಳಿಕ ಚೋಪ್ರಾ ನಟನೆಯ `ನಮಸ್ತೆ ಇಂಗ್ಲೆಂಡ್’ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 2007 ರಲ್ಲಿ ಬಿಡುಗಡೆಯಾದ ಕತ್ರಿನಾ ಕೈಫ್, ಅಕ್ಷಯ್ ಕುಮಾರ್ ನಟನೆಯ ನಮಸ್ತೆ ಲಂಡನ್ ಚಿತ್ರ ಬಿಡಗಡೆಯಾಗಿತ್ತು. ಸದ್ಯ ಬಿಡುಗೆಡಯಾಗಿರುವ ನಮಸ್ತೆ ಇಂಗ್ಲೆಂಡ್ ಸಿನಿಮಾ ತ್ರಿಕೋನ ಪ್ರೇಮ ಕಥೆಯನ್ನು ಹೊಂದಿದೆ. ಸಿನಿಮಾ ನಡುವಿನ ವಿರಾಮ ಸಮಯದಲ್ಲಿ ಚೋಪ್ರಾ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಈ ಚಿತ್ರದ ಬಳಿಕ `ಜನರಿಯಾ ಜೋಡಿ’, `ಸಂದೀಪ್ ಅಂಡ್ ಪಿಂಕಿ ಫರ್ಹಾ’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.instagram.com/p/BoRcQ3CAkfP/?taken-by=parineetichopra

https://www.instagram.com/p/BoRRs15gVKx/?taken-by=parineetichopra

https://www.instagram.com/p/BoN1hS4gzy6/?taken-by=parineetichopra

 

https://www.instagram.com/p/BiQ8owmlwF_/?taken-by=parineetichopra

 

Comments

Leave a Reply

Your email address will not be published. Required fields are marked *