ಮಕ್ಕಳನ್ನು ವೈದ್ಯರಲ್ಲಿ ತೋರಿಸಲು ಪೋಷಕರ ನೂಕುನುಗ್ಗಲು

– ರಾಯಚೂರಿನಲ್ಲಿ ವಿಪರೀತ ಡೆಂಗ್ಯೂ, ವೈರಲ್ ಫೀವರ್

ರಾಯಚೂರು: ಜಿಲ್ಲೆಯಲ್ಲಿ ಡೆಂಗ್ಯೂ, ವೈರಲ್ ಫೀವರ್ ಹೆಚ್ಚಾದ ಹಿನ್ನೆಲೆ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳನ್ನ ವೈದ್ಯರಲ್ಲಿ ತೋರಿಸಲು ಪೋಷಕರು ಮುಗಿಬೀಳುವ ಪರಸ್ಥಿತಿ ಉಂಟಾಗಿದೆ.

ವೈರಲ್ ಫೀವರ್ ಹೆಚ್ಚು ಮಕ್ಕಳಲ್ಲಿ ಬಂದಿರುವುದರಿಂದ ಪೋಷಕರು, ನೂಕುನುಗ್ಗಲು ಮಾಡಿಕೊಂಡು ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಇದೇ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಿಂದ್ಲೇ ಮೀಸಲಾತಿ ಆಕ್ರೋಶ – ಇಕ್ಕಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ

ಪ್ರಯೋಗಾಲಯಗಳ ಮುಂದೆಯೂ ಮಕ್ಕಳ ರಕ್ತ, ಮೂತ್ರ ಪರೀಕ್ಷೆಗಾಗಿ ಪೋಷಕರು ಮುಗಿಬಿದ್ದಾರೆ. ಹೆಚ್ಚು ಪ್ರಮಾಣದಲ್ಲಿ ಚಿಕ್ಕ ಮಕ್ಕಳನ್ನು ಬಾಧಿಸುತ್ತಿರುವ ಡೆಂಗ್ಯೂ, ವೈರಲ್ ಫೀವರ್ ನಿಂದ ಪ್ರತೀ ನಿತ್ಯ ನೂರಾರು ಮಕ್ಕಳು ತಾಲೂಕು ಆಸ್ಪತ್ರೆಗೆ ಬರುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಸ್ಫೋಟ – ಮೂವರು ಸಾವು, ನಾಲ್ವರ ಸ್ಥಿತಿ ಗಂಭೀರ

ತಾಲೂಕು ಆಸ್ಪತ್ರೆಯಲ್ಲಿ ಈಗಾಗಲೇ ಬೆಡ್ ಕೊರತೆ ಎದುರಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ವೈದ್ಯರು ಮಕ್ಕಳನ್ನು ಬೇರೆಡೆ ಕಳುಹಿಸುತ್ತಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಈಗಾಗಲೇ ಡೆಂಗ್ಯೂವಿನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮಕ್ಕಳಲ್ಲಿ ವೈರಲ್ ಫೀವರ್ ಹರಡುತ್ತಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಷ್ಟು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಅಲ್ಲದೆ ಬೆಡ್‍ಗಳ ಸಮಸ್ಯೆಯನ್ನು ನಿವಾರಿಸಬೇಕಿದೆ.

Comments

Leave a Reply

Your email address will not be published. Required fields are marked *