ನೀನ್ ಹುಟ್ಟಿದ್ದೇ ಗೌರಿ ಹತ್ಯೆ ಮಾಡಲು, ನಿನ್ನ ಹೆಸರಲ್ಲಿದೆ ಧರ್ಮರಕ್ಷಣೆಯ ಸಂಕೇತ- ಪರಶುರಾಮ್ ವಾಗ್ಮೋರೆಗೆ ಮಾಡಿದ್ರಂತೆ ಬ್ರೈನ್‍ವಾಶ್..!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕ ಆರೋಪಿ ಪರುಶುರಾಮ್ ವಾಗ್ಮೋರೆಯನ್ನ ತನಿಖಾಧಿಕಾರಿಗಳು ಹತ್ಯೆಯಾದ ಸ್ಥಳದಲ್ಲಿ ಮರುಸೃಷ್ಠಿ ಮಾಡಿಸಿದ್ದಾರೆ. ಗೌರಿ ಹತ್ಯೆ ಮಾಡಿದ ಸ್ಥಳದ ಮೃರುಸೃಷ್ಠಿಯ ವೇಳೆ ಹಂತಕ ವಾಗ್ಮೋರೆ ಹತ್ಯೆಯ ರಹಸ್ಯವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಆರೋಪಿ ವಾಗ್ಮೋರೆ ಮರು ಸೃಷ್ಠಿಯ ವೇಳೆ ತನಿಖಾಧಿಕಾರಿಗಳ ಮುಂದೆ ಹೇಳಿರುವ ಸ್ಫೋಟಕ ಸತ್ಯವನ್ನ ಬಾಯ್ಬಿಟ್ಟಿದ್ದಾನೆ.

ನೀನು ಕೃಷ್ಣನ ವಂಶಸ್ಥ, ಭಗವಂತನ ವಂಶಸ್ಥ, ನೀನು ಹುಟ್ಟಿರುವುದೇ ಧರ್ಮದ ವಿರುದ್ಧ ಮಾತನಾಡುವ ಗೌರಿ ಲಂಕೇಶ್ ಅಂತವರನ್ನ ಹತ್ಯೆ ಮಾಡಲು. ನಿನ್ನ ಹೆಸರಲ್ಲೇ ಧರ್ಮ ರಕ್ಷಣೆಯ ಸಂಕೇತವಿದೆ ಅಂತೆಲ್ಲಾ ಪರಶುರಾಮ್ ವಾಗ್ಮೋರೆಯನ್ನ ಆರೋಪಿ ಸುಜೀತ್ ಹಾಗೂ ಕಾಳೆ ವಾಗ್ಮೋರೆಯನ್ನ ಪ್ರೇರೇಪಿಸಿದ್ದರಂತೆ. ಅಷ್ಟೇ ಅಲ್ಲ ಗೌರಿ ಲಂಕೇಶ್ ಧರ್ಮದ ವಿರುದ್ಧ ಮಾತನಾಡಿರುವ ವಿಡಿಯೋಗಳನ್ನ ಯುಟ್ಯೂಬ್‍ಗಳಲ್ಲಿ ಪದೇ ಪೇದೆ ತೋರಿಸ್ತಿದ್ದರಂತೆ. ಇದೆನೆಲ್ಲ ನೋಡಿದ ಮೇಲೆ ಸ್ನೇಹಿತರು ಹೇಳುತ್ತಿರುವುದೇ ಸರಿ ಎನಿಸಿತು. ಹೀಗಾಗಿ ಗೌರಿಯನ್ನ ಹತ್ಯೆ ಮಾಡಿದ್ದಾಗಿ ಎಸ್‍ಐಟಿ ತನಿಖಾಧಿಕಾರಿಗಳ ಮುಂದೆ ಆರೋಪಿ ಪರಶುರಾಮ್ ವಾಗ್ಮೋರೆ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ.

ಇನ್ನು ಪ್ರಕರಣದ ಮರುಸೃಷ್ಠಿಯ ವೇಳೆ ಗೌರಿ ಹತ್ಯೆ ಹೇಗೆ ಮಾಡಿದ್ದು ಅನ್ನೋದರ ಬಗ್ಗೆ ಪರಶುರವಾಮ್ ವಾಗ್ಮೋರೆ ತನಿಖಾಧಿಕಾರಿಗಳ ಮುಂದೆ ಇಂಚಿಂಚು ಬಾಯ್ಬಿಟ್ಟಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಗೌರಿ ಲಂಕೇಶ್ ಮನೆ ಗೇಟ್ ಓಪನ್ ಮಾಡುತ್ತಿದ್ದಂತೆ ಹಣೆಗೆ ಗುರಿ ಇಟ್ಟು ಶೂಟ್ ಮಾಡಿದೆ ಅದು ಯಶಸ್ವಿಯಾಗಲಿಲ್ಲ. ಆಗ ಗೇಟಿನಿಂದ ಒಳಗಡೆ ನುಗ್ಗಿ ಮನಸೋ ಇಚ್ಚೆ ಗುಂಡು ಹಾರಿಸಿದ್ದಾಗಿ ತನಿಖಾಧಿಕಾರಿಗಳ ಮುಂದೆ ಪರಶುರಾಮ್ ವಾಗ್ಮೋರೆ ತಪ್ಪೊಪ್ಪಿಕೊಂಡಿದ್ದಾನೆಂದು ಹೇಳಲಾಗ್ತಿದೆ.

Comments

Leave a Reply

Your email address will not be published. Required fields are marked *