ಏರ್‌ಪೋರ್ಟ್‌ನಲ್ಲೇ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಎಸ್‍ಐಟಿ ಸಿದ್ಧತೆ: ಪರಮೇಶ್ವರ್

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಬರುವ ಮಾಹಿತಿ ಇದೆ. ಅವರೇ ಬರುವುದಾಗಿ ಹೇಳಿದ್ದು, ಬಂದರೆ ನಮ್ಮ ಎಸ್‍ಐಟಿ (SIT) ಅಧಿಕಾರಿಗಳು ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆಯುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‍ರನ್ನು ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆಯಲು ಈಗಾಗಲೇ ವಾರೆಂಟ್ ಜಾರಿಯಾಗಿದೆ. ಬಳಿಕ ಕಾನೂನು ಪ್ರಕಾರ ಅವರನ್ನು ವಿಚಾರಣೆ ನಡೆಸಲಾಗುತ್ತದೆ. ಪ್ರಜ್ವಲ್ ವಾಪಸ್ ಆಗುವ ಹಿನ್ನೆಲೆಯಲ್ಲಿ ಎಸ್‍ಐಟಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಬೇರೆ ದೇಶಕ್ಕೆ ಹೋಗಿ ನಾವು ಅರೆಸ್ಟ್ ಮಾಡುವಂತಿಲ್ಲ. ಆ ರೀತಿ ಮಾಡಲು ಬರಲ್ಲ. ಕೇಂದ್ರ ಸರ್ಕಾರ ಕೂಡ ಯಾರನ್ನಾದರೂ ಕಳುಹಿಸಿ ಅರೆಸ್ಟ್ ಮಾಡಲು ಆಗಲ್ಲ. ಇಂಟರ್ ಪೋಲ್ ಕೂಡ ಇರೋದೆ ಅದಕ್ಕಾಗಿ. ನೆಲಮಂಗಲಕ್ಕೆ ಹೋಗಿ ಬಂಧನ ಮಾಡಿಕೊಂಡು ಬಂದಂಗೆ ಅಲ್ಲ. ಕಾನೂನು ಪ್ರಕಾರ ವಾರೆಂಟ್ ಜಾರಿಯಾಗಿದೆ. ಅದರಂತೆ ಏರ್‌ಪೋರ್ಟ್‌ನಲ್ಲೇ ಬಂಧನವಾಗಬೇಕು. ಬಂಧನಕ್ಕೆ ಅದರದ್ದೇ ಆದ ಪ್ರಕ್ರಿಯೆ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ವಕೀಲೆ ಚೈತ್ರಾಗೌಡ ಆತ್ಮಹತ್ಯೆ ಕೇಸ್‌ ತನಿಖೆ ಸಿಸಿಬಿ ಹೆಗಲಿಗೆ

ಇನ್ನೂ ಪಾಸ್‌ಪೋರ್ಟ್ ರದ್ದತಿಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕಾನೂನು ಪ್ರಕ್ರಿಯೆ ನೋಡಿ ರದ್ದು ಮಾಡ್ತಾರೆ. ಈ ಪ್ರಕ್ರಿಯೆಯಲ್ಲಿ ನಿಧಾನಗತಿ ಆಗಿದೆ. ಈಗ ರದ್ದು ಮಾಡುತ್ತೇವೆ ಎಂದಿದ್ದಾರೆ. ಪ್ರಜ್ವಲ್ ಪ್ರಕರಣ ಚುನಾವಣೆ ಮೇಲೆ ಎಫೆಕ್ಟ್ ಆಗುತ್ತೆ ಎಂಬ ಬಗ್ಗೆ ಗೊತ್ತಿಲ್ಲ. ಕಾನೂನು ಪ್ರಕಾರ ಎಲ್ಲಾ ಕ್ರಮವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ನಿವಾಸದ ಮುಂದೆ ಪ್ರತಿಭಟನೆ – ಮಾಜಿ ಸಚಿವ ಸೇರಿ ಇಬ್ಬರು ಪೊಲೀಸರ ವಶಕ್ಕೆ