`ಪಪ್ಪು’ ಬದಲಾಗಿ ಈ ಪದವನ್ನು ಬಳಸಲಿದೆ ಬಿಜೆಪಿ

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ `ಪಪ್ಪು’ ಎಂಬ ಪದವನ್ನು ಬಳಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಜಾಹೀರಾತಿನಲ್ಲಿ ‘ಯುವರಾಜ್’ ಎಂಬ ಪದವನ್ನು ಬಳಸಿಕೊಳ್ಳಲು ನಿರ್ಧರಿಸಿದೆ.

ಯುವರಾಜ್ ಎಂಬ ಪದ ಬಳಕೆ ಮಾಡಲು ಚುನಾವಣಾ ಆಯೋಗದಿಂದ ಅನುಮತಿ ದೊರಕ್ಕಿದ್ದು, ಗುಜರಾತ್ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಮತ್ತು ಫೇಸ್ ಬುಕ್ ಪೇಜಿನಲ್ಲಿ ಈಗಾಗಲೇ ವಿಡಿಯೋವನ್ನು ಸಹ ಅಪ್ಲೋಡ್ ಮಾಡಿಕೊಂಡಿದೆ. ಈ ಮೊದಲು ಗುಜರಾತ್ ಬಿಜೆಪಿ ತನ್ನ ಸಾಮಾಜಿಕ ಜಾಲತಾಣಗಳ ಜಾಹೀರಾತಿನಲ್ಲಿ ಪಪ್ಪು ಎಂಬ ಪದದ ಬಳಕೆ ಮಾಡಿಕೊಂಡಿತ್ತು. ಆದರೆ ಚುನಾವಣಾ ಆಯೋಗದ ಮಾಧ್ಯಮ ಕಮಿಟಿ, ಪಪ್ಪು ಎಂಬ ಪದ ಅಗೌರವವನ್ನು ತೋರಿಸುತ್ತದೆ ಎಂದು ತಿಳಿಸಿತ್ತು.

ಬಿಜೆಪಿ ಸ್ಪಷ್ಟನೆ: ಪಪ್ಪು ಎಂಬ ಪದ ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಅಗೌರವವನ್ನು ಉಂಟು ಮಾಡುವುದಿಲ್ಲ ಎಂದು ತನ್ನ ವಾದವನ್ನು ಮಂಡಿಸಿತ್ತು. ಆದರೂ ಚುನಾವಣೆ ಆಯೋಗ ಪಪ್ಪು ಪದ ಬಳಕೆಯನ್ನು ನಿರ್ಬಂಧಿಸಿತ್ತು.

ಚುನಾವಣೆಗೆ ಜಾಹೀರಾತಿನಲ್ಲಿ ಬಳಸುವ ಸ್ಕ್ರಿಪ್ಟ್ ನ್ನು ಒಂದು ತಿಂಗಳ ಮುಂಚೆಯೇ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಆಯೋಗದ ಪರಿಶೀಲನೆ ಬಳಿಕವಷ್ಟೇ ಸ್ಕ್ರಿಪ್ಟ್ ನ್ನು ಬಳಸಬೇಕು ಎಂಬ ನಿಯಮವಿದೆ.

 

Comments

Leave a Reply

Your email address will not be published. Required fields are marked *