ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಎಬಿಡಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ

ವೆಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಭರ್ಜರಿ ಪ್ರದಶನ ನೀಡಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕಮ್ ಬ್ಯಾಕ್ ಮಾಡಿದ ಪಾಂಡ್ಯ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.

ಆರಂಭಿಕ ಆಟಗಾರರ ವೈಫಲ್ಯದ ಬಳಿಕ ಟೀಂ ಇಂಡಿಯಾಗೆ ಅಂಬಾಟಿ ರಾಯಡು ಆಸರೆಯಾಗಿ ತಂಡದ ಮೊತ್ತವನ್ನು 200 ಗಡಿ ಸಮೀಪಿಸುವಂತೆ ಮಾಡಿದರು. ಇದರ ಬಳಿಕ ನಂ.8 ಸ್ಥಾನದಲ್ಲಿ ಬಂದ ಹಾರ್ದಿಕ್ ಪಾಂಡ್ಯ ಸತತ ಸಿಕ್ಸರ್ ಸಿಡಿಸುವ ಮೂಲಕ ತಂಡ ಸವಾಲಿನ ದಾಖಲಿಸಲು ಕಾರಣರಾದರು. ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಮೂಲಕ ಪಾಂಡ್ಯ 45 ರನ್ ಸಿಡಿಸಿದರು.

ಪ್ರಮುಖವಾಗಿ ಅಂತಿಮ ಓವರ್ ಗಳಲ್ಲಿ ಪಾಂಡ್ಯ ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾದರೆ, ಇತ್ತ ಸ್ಫೋಟ ಆಟಗಾರ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂದಹಾಗೇ ಎಬಿಡಿ ಕಳೆದ 2 ದಶಕಗಳಲ್ಲಿ 4 ಬಾರಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಸದ್ಯ ಪಾಂಡ್ಯ ಕೂಡ 4 ಬಾರಿ ಹ್ಯಾಟ್ರಿಕ್ ಸಿಕ್ಸರ್ ಸಾಧನೆ ಮಾಡಿದ್ದು, 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಇಮಾದ್ ವಾಸೀಂ, ಶಾಬಾದ್ ಖಾನ್ ಅವರ ಬೌಲಿಂಗ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆ ಬಳಿಕ 2017ರ ಆಸ್ಟ್ರೇಲಿಯಾ ಏಕದಿನ ಸರಣಿಯ ಚೆನ್ನೈ ಪಂದ್ಯದಲ್ಲಿ ಆ್ಯಡಂ ಜಂಪಾ ಬೌಲಿಂಗ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇದನ್ನು ಓದಿ: ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *