ರಾಯಚೂರು: ಜಿಲ್ಲೆಯ ಲಿಂಗಸುಗೂರು ಹೊರವಲಯದಲ್ಲಿ ನಡೆದಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಕೊಲೆ ಪ್ರಕರಣದ ಆರೋಪಿಗಳು ಸೆರೆ ಸಿಕ್ಕಿದ್ದಾರೆ.

ಕೋಟಾ ಗ್ರಾಪಂ ಪಿಡಿಓ ಗಜದಂಡಯ್ಯ ಕೊಲೆಯಾಗಿದ್ದರು. ಇದೀಗ ಕೊಲೆ ಪ್ರಕರಣದ ಆರೋಪಿಗಳನ್ನು ಲಿಂಗಸುಗೂರು ಪೊಲೀಸರು (Police) 24 ಗಂಟೆಯಲ್ಲಿ ಬಂಧಿಸಿದ್ದಾರೆ. ಅಕ್ಟೋಬರ್ 6 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವಿಜಯದಶಮಿ ಹಿನ್ನೆಲೆ ಬನ್ನಿ ಕೊಡುವ ನೆಪದಲ್ಲಿ ಬೈಕ್ (Bike) ನಿಲ್ಲಿಸಿ ಕೊಲೆ ಮಾಡಲಾಗಿತ್ತು. ಇದೀಗ ಒಂದೇ ಹೆಸರಿನ ಇಬ್ಬರು ಆರೋಪಿಗಳಾದ ಶೀಲವಂತರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಪತ್ಯೇಕ ಎರಡು ಕೊಲೆ – ಬನ್ನಿ ಕೊಡುವ ನೆಪದಲ್ಲಿ ಪಿಡಿಓ ಹತ್ಯೆ
ಪ್ರಕರಣದ ಮೊದಲ ಆರೋಪಿಯ ತಾಯಿಯೊಂದಿಗೆ (Mother) ಪಿಡಿಓ ಅನೈತಿಕ ಸಂಬಂಧ ಹೊಂದಿದ್ದ ಎಂದು ಆರೋಪಿಸಿ ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೋರ್ವ ಆರೋಪಿ ಶೀಲವಂತ ಗ್ರಾಮ ಪಂಚಾಯತ್‍ನಲ್ಲಿ ನೌಕರನಾಗಿದ್ದು, ಕೊಲೆಗೆ ಸಹಕಾರ ನೀಡಿದ್ದಾನೆ. ಹಾಗಾಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣ – ಇಬ್ಬರು ಪೊಲೀಸ್ ಪೇದೆಗಳ ಅಮಾನತು

Leave a Reply