ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

ಚಂದ್ರಯಾನ-3 ಮನುಕುಲದ ಐತಿಹಾಸಿಕ ಕ್ಷಣ: ಫವಾದ್‌ ಬಣ್ಣನೆ

ಇಸ್ಲಾಮಾಬಾದ್‌: ಇಸ್ರೋದ (ISRO) ಚಂದ್ರಯಾನ-3 (Chandrayaan-3) ಯೋಜನೆಯು ಅಂತಿಮ ಹಂತಕ್ಕೆ ತಲುಪಿದೆ. ಇಂದು ಚಂದ್ರನ (Moon) ಮೇಲ್ಮೈನಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ. ಇದನ್ನು ಐತಿಹಾಸಿಕ ಕ್ಷಣ ಎಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್‌ ಚೌಧರಿ (Fawad Chaudhry) ಬಣ್ಣಿಸಿದ್ದಾರೆ.

ಇಮ್ರಾನ್‌ ಖಾನ್‌ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ಫವಾದ್‌ ಚೌಧರಿ, ಭಾರತೀಯ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ. ಭಾರತ ಕೈಗೊಂಡಿರುವ ಚಂದ್ರಯಾನ-3 ಮನುಕುಲದ ಐತಿಹಾಸಿಕ ಕ್ಷಣ. ಪಾಕಿಸ್ತಾನದ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್

ತಮ್ಮ ಟ್ವಿಟ್ಟರ್‌ (ಎಕ್ಸ್‌) ಖಾತೆಯಲ್ಲಿ ಪೋಸ್ಟ್‌ ಹಾಕಿರುವ ಫವಾದ್‌ ಚೌಧರಿ, ಪಾಕ್ ಮಾಧ್ಯಮಗಳು ಬುಧವಾರ ಸಂಜೆ 6:15 ಕ್ಕೆ ಚಂದ್ರನ ಮೇಲ್ಮೈಗೆ ಚಂದ್ರಯಾನ-3 ಲ್ಯಾಂಡಿಂಗ್ ಆಗುವುದನ್ನು ನೇರಪ್ರಸಾರ ಮಾಡಬೇಕು. ಮಾನವ ಕುಲಕ್ಕೆ ವಿಶೇಷವಾಗಿ ಭಾರತೀಯರಿಗೆ, ವಿಜ್ಞಾನಿಗಳಿಗೆ ಮತ್ತು ಭಾರತದ ಬಾಹ್ಯಾಕಾಶ ಸಮುದಾಯಕ್ಕೆ ಇದೊಂದು ಐತಿಹಾಸಿಕ ಕ್ಷಣ. ಅವರೆಲ್ಲರಿಗೂ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಚಂದ್ರನ ಅಂಗಳದಲ್ಲಿ ಇಂದು ಸಂಜೆ 6:04ಕ್ಕೆ ಚಂದ್ರಯಾನ-3 ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ. ಚಂದ್ರಯಾನ-3 ಯಶಸ್ಸಿಗೆ ದೇಶಾದ್ಯಂತ ಪ್ರಾರ್ಥನೆ, ಪೂಜೆ-ಪುನಸ್ಕಾರ ನಡೆಯುತ್ತಿವೆ. ಲ್ಯಾಂಡಿಂಗ್‌ ಕಾರ್ಯಕ್ರಮದ ನೇರಪ್ರಸಾರಕ್ಕೆ ಹಲವೆಡೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ವರ್ಜುಯಲ್‌ ಮೂಲಕ ಚಂದ್ರಯಾನ-3 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: Chandrayaan-3: ಕೊನೆಯ ಆ 20 ನಿಮಿಷವೇ ಆತಂಕ – ಲ್ಯಾಂಡಿಂಗ್‌ ಹೇಗಿರುತ್ತೆ? ಈ ಬಗ್ಗೆ ನೀವು ತಿಳಿಯಲೇಬೇಕು…

ಭಾನುವಾರ ಲ್ಯಾಂಡಿಂಗ್ ವೇಳೆ ಚಂದ್ರನ ಮೇಲ್ಮೈಗೆ ಅಪ್ಪಳಿಸಿದ ರಷ್ಯಾದ ಚಂದ್ರನ ಮಿಷನ್ ಲೂನಾ-25 ವಿಫಲವಾಗಿತ್ತು. 2019 ರಲ್ಲಿ ಚಂದ್ರಯಾನ-2 ಮಿಷನ್ ಚಂದ್ರನ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿರುವ ಅದೇ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿಯಲಾಗದೇ ವಿಫಲವಾಗಿತ್ತು. ಈಗ ಭಾರತದ ಚಂದ್ರಯಾನ-3 ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]