ಪಾಕ್ ಪೈಲಟ್‍ಗಳಿಗೆ ರಫೇಲ್ ತರಬೇತಿ – ಫೇಕ್ ನ್ಯೂಸ್ ಎಂದ ಫ್ರಾನ್ಸ್

ನವದೆಹಲಿ: ರಫೇಲ್ ಯುದ್ಧ ವಿಮಾನ ತರಬೇತಿಯನ್ನು ಪಾಕಿಸ್ತಾನದ ಪೈಲಟ್‍ಗಳ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಸುಳ್ಳು ಎಂದು ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅಲೆಕ್ಸಾಂಡರ್ ಝೈಗ್ಲರ್ ಅವರು, ಇದೊಂದು ಸುಳ್ಳು ಸುದ್ದಿ ಎಂದು ಹೇಳಿ ತಳ್ಳಿ ಹಾಕಿದ್ದಾರೆ.

ಪಾಕಿಸ್ತಾನಕ್ಕೆ ಕತಾರ್ ರಫೇಲ್ ವಿಮಾನವನ್ನು ನೀಡಿದೆ. ಅಲ್ಲದೇ ನವೆಂಬರ್ 2017ರಲ್ಲಿ ಪಾಕಿಸ್ತಾನ ಮೊದಲ ಬ್ಯಾಚಿನ ಪೈಲಟ್‍ಗಳಿಗೆ ರಫೇಲ್ ತರಬೇತಿಯನ್ನು ನೀಡಿದೆ ಎಂದು ವಿದೇಶಿ ಮಾಧ್ಯಮವೊಂದು ವರದಿ ಪ್ರಕಟಿಸಿತ್ತು. ಅಮೆರಿಕದ ಮಾಧ್ಯಮ ವರದಿಯ ಪ್ರಕಾರ, 6.3 ಶತಕೋಟಿ ಯೂರ್ ಒಪ್ಪಂದದ ಅನ್ವಯ ಕತಾರ್ ದೇಶಕ್ಕೆ ಮೇ 2015ರಲ್ಲಿ 24 ರಫೇಲ್ ವಿಮಾನಗಳನ್ನು ಡಸಾಲ್ಟ್ ಕಂಪನಿ ನೀಡಿದೆ ಎಂದು ಹೇಳಿದೆ.

ಈ ವರದಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ವಕ್ತರರಾದ ರಚಿತ್ ಸೇಠ್ ಅವರು ಇದು ಭಾರತಕ್ಕೆ ಹೆದರಿಕೆ ತರುವ ವಿಚಾರ ಎಂದು ಹೇಳಿದ್ದರು.

ಭಾರತ 36 ರಫೇಲ್ ಯುದ್ಧ ವಿಮಾನಗಳನ್ನು ಡಸಾಲ್ಟ್ ಕಂಪನಿಯಿಂದ ಖರೀದಿಸುವ ಸಂಬಂಧ 58 ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ.

 

Comments

Leave a Reply

Your email address will not be published. Required fields are marked *