ಖಾಸಗಿ ವೀಡಿಯೋ ಲೀಕ್‌ – ನೆಟ್ಟಿಗರ ಕಾಮೆಂಟ್‌ಗೆ ರೋಸಿ ಇನ್‌ಸ್ಟಾಗೆ ಗುಡ್‌ಬೈ ಹೇಳಿದ ಪಾಕ್‌ ತಾರೆ

ಇಸ್ಲಾಮಾಬಾದ್‌: ತನ್ನ ಖಾಸಗಿ ವೀಡಿಯೋ ಲೀಕ್‌ ಆದ ಬೆನ್ನಲ್ಲೇ ಪಾಕಿಸ್ತಾನದ ಟಿಕ್‌ಟಾಕ್‌ ಸ್ಟಾರ್‌ (Pakistani Influencer) ಇಮ್ಶಾ ರೆಹಮಾನ್‌ (Imsha Rehman) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ವೀಡಿಯೋವನ್ನ ಬಹಿರಂಗಪಡಿಸಿದ್ದಾರೆ ಎಂದು ನೆಟ್ಟಿಗರ ವಿರುದ್ಧ ಗರಂ ಆಗಿದ್ದಾರೆ.

ತನ್ನ ಗೆಳೆಯ ಮಿನಾಹಿಲ್‌ ಮಲಿಕ್‌ ಜೊತೆಗಿನ ಖಾಸಗಿ ವೀಡಿಯೋ (Private Video) ಆನ್‌ಲೈನ್‌ನಲ್ಲಿ ಹರಿದಾಡಿದ 2ನೇ ಪ್ರಕರಣ ಇದಾಗಿದೆ. ವೀಡಿಯೋ ಲೀಕ್‌ ಆದ ಬೆನ್ನಲ್ಲೇ ನೆಟ್ಟಿಗರು ಹಾಗೂ ಆಕೆಯ ಫಾಲೋವರ್ಸ್‌ಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಫೇಮಸ್‌ ಆಗೋದಕ್ಕೆ ಅಂತಾನೆ ಬಟ್ಟೆ ಬಿಚ್ಚಿದ್ದೀರಾ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಇದರಿಂದ ರೋಸಿಹೋದ ನಟಿ, ಇನ್‌ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

ವೀಡಿಯೋ ಲೀಕ್‌ ಬಗ್ಗೆ ಇಮ್ಶಾ ಹೇಳಿದ್ದೇನು?
ರೀಲ್ಸ್‌ ತಾರೆಯ ಖಾಸಗಿ ವೀಡಿಯೋದ ಸ್ಕ್ರೀನ್‌ಶಾಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಕೆಲವನ್ನು ಮೀಮ್ಸ್‌ಗಳಾಗಿಯೂ ಬಳಕೆ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಇಮ್ಶಾ, ಇದು ನಕಲಿ ವೀಡಿಯೋ, ಫೋಟೋ ಮಾರ್ಫಿಂಗ್‌ ಮಾಡಲಾಗಿದೆ. ವೀಡಿಯೋ ವೈರಲ್‌ ಆಗುವಷ್ಟರಲ್ಲಿ ನನ್ನ ಖಾತೆ ನಿಷ್ಕ್ರಿಯಗೊಳಿಸಿರುತ್ತೇನೆ ಎಂದು ಕೊನೆಯ ಸಂದೇಶ ಬರೆದುಕೊಂಡಿದ್ದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಯುಮಾಲಿನ್ಯ ಕಂಟಕ – ಜನರ ಓಡಾಟಕ್ಕೆ ನಿಷೇಧ, ಅಂಗಡಿ-ಮಾರ್ಕೆಟ್‌ ತೆರೆಯಲು ಮಿತಿ

ಇಮ್ಶಾ ರೆಹಮಾನ್ ಯಾರು?
2002ರ ಅಕ್ಟೋಬರ್‌ 7ರಂದು ಲಾಹೋರ್‌ನಲ್ಲಿ ಜನಿಸಿದ ಇಮ್ಶಾ ಪಾಕಿಸ್ತಾನದಲ್ಲಿ ಖ್ಯಾತಿ ಪಡೆದಿರುವ ರೀಲ್ಸ್‌ ಸ್ಟಾರ್‌. ಆಗಾಗ್ಗೆ ವಿಭಿನ್ನ ವಿಷಯಗಳನ್ನು ಜನರ ಮುಂದಿಡುತ್ತಾ ಹಾಗೂ ಮನರಂಜಿಸುತ್ತಾ ಹೆಸರುವಾಸಿಯಾಗಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ನೋ ಸೆಕ್ಸ್‌, ನೋ ಮ್ಯಾರೆಜ್‌, ನೋ ಗಿವಿಂಗ್‌ ಬರ್ತ್‌ – ಏನಿದು ‘4ಬಿ ಮೂವ್‌ಮೆಂಟ್‌’?