ಬೆಲ್ಲಿ ಡ್ಯಾನ್ಸರ್ಸ್ ಮೂಲಕ ಹೂಡಿಕೆದಾರರನ್ನು ಸೆಳೆಯಲು ಮುಂದಾಗಿ ಟ್ರೋಲಾದ ಪಾಕ್

ಇಸ್ಲಾಮಾಬಾದ್: ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಪಾಕಿಸ್ತಾನ `ಖೈಬರ್ ಫಾಖ್ತೂಂಕ್ವಾ ಇನ್ವೆಸ್ಟ್‌ಮೆಂಟ್‌ ಆಪರ್ಚುನಿಟೀಸ್ ಕಾನ್ಫರೆನ್ಸ್’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬೆಲ್ಲಿ ಡ್ಯಾನ್ಸರ್‌ಗಳನ್ನು ಕರೆಸಿ ನೃತ್ಯ ಮಾಡಿಸುವ ಮೂಲಕ ಹೂಡಿಕೆದಾರರ ಸೆಳೆಯಲು ಪಾಕ್ ಮುಂದಾಗಿತ್ತು. ಪಾಕ್‍ನ ಈ ಹೊಸ ಪ್ರಯತ್ನ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಪಾಕಿಸ್ತಾನ ತನ್ನ ವೆಚ್ಚ ಕಡಿತಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸುದ್ದಿಯಾಗಿತ್ತು. ಆದರೆ ಈಗ ಬೆಲ್ಲಿ ಡ್ಯಾನ್ಸರ್‌ಗಳ ಮೂಲಕ ಮತ್ತೆ ಪಾಕ್ ನಗೆಪಾಟಲಿಗೆ ಕಾರಣವಾಗಿದೆ. ಹೊಸ ಪ್ರಯತ್ನಕ್ಕೆ ಕೈ ಹಾಕಿ ಮತ್ತೆ ಟ್ರೋಲ್ ಆಗುತ್ತಿದೆ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ಸೆ.4 ರಿಂದ 8ರವರೆಗೆ ಪಾಕಿಸ್ತಾನ `ಖೈಬರ್ ಫಾಖ್ತೂಂಕ್ವಾ ಇನ್ವೆಸ್ಟ್‌ಮೆಂಟ್‌ ಆಪರ್ಚುನಿಟೀಸ್ ಕಾನ್ಫರೆನ್ಸ್’ ಆಯೋಜಿಸಲಾಗಿತ್ತು.

ಈ ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸರ್‌ಗಳ ನೃತ್ಯ ಕಾರ್ಯಕ್ರಮ ಏರ್ಪಡಿಸಿ ಹೂಡಿಕೆದಾರರನ್ನು ಸೆಳೆಯಲು ಪ್ಲಾನ್ ಮಾಡಿತ್ತು. ಸಮಾವೇಶದ ನಡುವೆ ವೇದಿಕೆಯ ಮೇಲೆ ಬೆಲ್ಲಿ ಡ್ಯಾನ್ಸರ್‌ಗಳು ಸೊಂಟ ಬಳುಕಿಸಿ ಹೂಡಿಕೆದಾರ ಮನಗೆಲ್ಲಲು ಪ್ರಯತ್ನಿಸಿದರು. ಆದರೆ ಈ ಪ್ರಯತ್ನ ಹೂಡಿಕೆದಾರರ ಮನ ಗೆದ್ದಿತ್ತೋ ಇಲ್ಲ ಎಂಬುದು ತಿಳಿದಿಲ್ಲ. ಆದರೆ ಮತ್ತೆ ಪಾಕಿಸ್ತಾನವನ್ನು ಟ್ರೋಲ್ ಮಾಡಲು ಹೊಸ ವಿಷಯ ಸಿಕ್ಕಂತಾಗಿದೆ.

ಸಮಾವೇಶದ ವೇದಿಕೆ ಮೇಲೆ ಡ್ಯಾನ್ಸರ್‌ಗಳು ಸಖತ್ ಸ್ಟಪ್ಸ್ ಹಾಕುತ್ತಿರುವ ವಿಡಿಯೋವನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೇರೆ ದೇಶದ ಕಥೆ ಹಾಗಿರಲಿ, ಸ್ವತಃ ಪಾಕಿಸ್ತಾನಿ ಪ್ರಜೆಯೇ ಪಾಕಿಸ್ತಾನದಲ್ಲಿ ಹೂಡಿಕೆ ಮಾಡುವಂತೆ ಮುಖ್ಯ ಅರ್ಥಶಾಸ್ತ್ರಜ್ಞರು ವಿದೇಶಿ ಹೂಡಿಕೆದಾರರಿಗೆ ಬೆಲ್ಲಿ ಡ್ಯಾನ್ಸರ್‌ಗಳ ಮೂಲಕ ಆಮಿಷ ಒಡ್ಡುತ್ತಿದ್ದಾರೆ ಎಂದು ಟೀಕಿಸಿದ್ದರು.

ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಆಗಿದ್ದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆರ್ಥಿಕವಾಗಿ ಕುಗ್ಗಿರುವ ಪಾಕಿಸ್ತಾನ ಈ ಹಿಂದೆ ಕತ್ತೆ, ಬೀದಿ ನಾಯಿಗಳನ್ನು ರಫ್ತು ಮಾಡುವ ವಿಚಿತ್ರ ಯೋಚನೆ ಮೂಲಕ ಟ್ರೋಲ್ ಆಗಿತ್ತು. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ.

https://twitter.com/_HarshKhare/status/1170598336841187328

ನಯಾ ಪಾಕಿಸ್ತಾನಕ್ಕೆ ಹೂಡಿಕೆದಾರರಿಗೆ ಸ್ವಾಗತ, ಕತ್ತೆ, ನಾಯಿಯನ್ನು ಮಾರಾಟ ಮಾಡುವುದರಿಂದ ಹಿಡಿದು ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸ್ ಕಾರ್ಯಕ್ರಮ ಏರ್ಪಡಿಸುವ ಮೂಲಕ ಪಾಕ್ ತನ್ನ ಆರ್ಥಿಕತೆ ಸರಿ ಮಾಡಿಕೊಳ್ಳಲು ನೋಡುತ್ತಿದೆ. ಹಾದಿ ತಪ್ಪಿರುವ ತನ್ನ ಆರ್ಥಿಕತೆಯನ್ನು ಸರಿದಾರಿಗೆ ತರಲು ಪಾಕಿಸ್ತಾನ ಚಿತ್ರ ವಿಚಿತ್ರ ಪ್ರಯತ್ನಕ್ಕೆ ಕೈ ಹಾಕುತ್ತಿದೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಹೂಡಿಕೆದಾರರನ್ನು ಸೆಳೆಯಲು ಬೆಲ್ಲಿ ಡ್ಯಾನ್ಸಿಂಗ್ ಬಿಟ್ಟರೆ ಬೇರೆ ಯಾವುದೇ ದಾರಿ ಪಾಕ್ ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಪಾಕ್ ಕಾಲೆಳೆಯುತ್ತ ವ್ಯಂಗ್ಯವಾಡಿದ್ದಾರೆ.

Comments

Leave a Reply

Your email address will not be published. Required fields are marked *