ಪಾಕಿಸ್ತಾನದ ಪ್ಯಾಸೆಂಜರ್ ವಿಮಾನ ಮಲೇಷ್ಯಾದಲ್ಲಿ ಸೀಜ್

ಕೌಲಾಲಂಪುರ: ಭೀಕರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ (Pakistan) ದೊಡ್ಡ ಅವಮಾನವೊಂದು ಎದುರಾಗಿದೆ. ಗುತ್ತಿಗೆ ಹಣ ನೀಡಿಲ್ಲ ಎಂದು ಹೇಳಿ ಪಾಕಿಸ್ತಾನದ ಪ್ಯಾಸೆಂಜರ್ ವಿಮಾನವನ್ನು (Plane) ಮಲೇಷ್ಯಾದ (Malaysia) ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 777 ವಿಮಾವನ್ನು ಮಲೇಷ್ಯಾದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ವಿಮಾನವನ್ನು ಮಲೇಷ್ಯಾದಿಂದ ಪಿಐಎ ಲೀಸ್‌ಗೆ ಪಡೆದಿತ್ತು. ಆದರೆ ಬಾಕಿ ಉಳಿಸಿಕೊಂಡಿದ್ದ ಗುತ್ತಿಗೆ ಹಣ 4 ಮಿಲಿಯನ್ ಡಾಲರ್ ಅನ್ನು ಪಾಕಿಸ್ತಾನ ಪಾವತಿ ಮಾಡಿರಲಿಲ್ಲ. ಕೋರ್ಟ್ ಆದೇಶದ ಮೇರೆಗೆ ಕೌಲಾಲಂಪುರ ಏರ್‌ಪೋರ್ಟ್‌ನಲ್ಲಿ ಈ ವಿಮಾನವನ್ನು ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನ ಗ್ಯಾರಂಟಿಗಳು ದೇಶವನ್ನು ದಿವಾಳಿಗೆ ತಳ್ಳಬಹುದು: ಮೋದಿ ಎಚ್ಚರಿಕೆ

ಈ ಹಿಂದೆ ಇದೇ ವಿಮಾನವನ್ನು 2021ರಲ್ಲಿಯೂ ಮಲೇಷ್ಯಾ ವಶಪಡಿಸಿಕೊಂಡಿತ್ತು. ಬಳಿಕ ಬಾಕಿ ಉಳಿದಿರುವ ಪಾವತಿಯ ಕುರಿತು ಪಾಕಿಸ್ತಾನದ ರಾಜತಾಂತ್ರಿಕರು ಭರವಸೆ ನೀಡಿದ ನಂತರ ಅದನ್ನು ಬಿಡಿಸಿಕೊಳ್ಳಲಾಗಿತ್ತು. 173 ಪ್ರಯಾಣಿಕರು ಹಾಗೂ ಸಿಬ್ಬಂದಿಯಿದ್ದ ವಿಮಾನ ಬಳಿಕ 2021ರ ಜನವರಿ 27ರಂದು ಪಾಕಿಸ್ತಾನಕ್ಕೆ ವಾಪಸಾಗಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು