ಗೆಲುವಿನ ಸನಿಹದತ್ತ ಟೀಂ ಇಂಡಿಯಾ-ಸಂಭ್ರಮಕ್ಕೆ ವರುಣದೇವ ಅಡ್ಡಿ

ಮ್ಯಾಂಚೆಸ್ಟರ್: ಟೀಂ ಇಂಡಿಯಾ ನೀಡಿದ 337 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಪಾಕಿಸ್ತಾನಕ್ಕೆ ಆರಂಭದಲ್ಲಿ ಇಮಾಮ್-ಉಲ್-ಹಕ್ ವಿಕೆಟ್ ಪಡೆಯುವ ಭಾರತೀಯ ಬೌಲರ್ ಗಳು ಆಘಾತ ನೀಡಿದರು. ಸದ್ಯ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 166 ರನ್ ಕಲೆ ಹಾಕಿದೆ.

ಟೀಂ ಇಂಡಿಯಾ ನೀಡಿದ 337 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭದಲ್ಲಿಯೇ ದೊಡ್ಡ ಆಘಾತವನ್ನು ನೀಡಿತು. ಆರಂಭಿಕರಾಗಿ ಇಮಾಮ್ ಉಲ್ ಹಕ್ ಮತ್ತು ಫಖಾರ್ ಖಾನ್ ಕಣಕ್ಕಿಳಿದರು. ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ತಮ್ಮ ಬೌಲಿಂಗ್ ಮೂಲಕ ಪಾಕ್ ಆಟಗಾರರನ್ನು ಕಟ್ಟಿ ಹಾಕಿದರು. ಈ ನಡುವೆ ಐದನೇ ಓವರಿನ ನಾಲ್ಕನೇ ಎಸೆತದಲ್ಲಿ ಗಾಯಕ್ಕೊಳಗಾದ ಭುವನೇಶ್ವರ್ ಮೈದಾನದಿಂದ ಹೊರ ನಡೆದರು. ಓವರ್ ಪೂರ್ಣಗೊಳಿಸಲು ಬಂದ ವಿಜಯ್ ಶಂಕರ್ ಮೊದಲ ಎಸೆತದಲ್ಲೇ ಇಮಾಮ್-ಉಲ್-ಹಕ್ ವಿಕೆಟ್ ಪಡೆದರು.

35 ಓವರ್ ಗಳು ಅಂತ್ಯವಾಗಿದ್ದು, 15 ಓವರ್ ಬಾಕಿ ಉಳಿದಿದೆ. ಪಾಕಿಸ್ತಾನಕ್ಕೆ ಗೆಲುವು ಸಾಧಿಸಲು ಇನ್ನು 90 ಎಸೆತಗಳಲ್ಲಿ 171 ರನ್ ಕಲೆ ಹಾಕಬೇಕಿದೆ.

ಭುವನೇಶ್ವರ್ ಗೆ ಸ್ನಾಯು ಸೆಳೆತ: ಟೀಂ ಇಂಡಿಯಾದ ಬಲಗೈ ವೇಗಿ ಪಾಕ್ ಬ್ಯಾಟಿಂಗ್ ಆರಂಭಿಸಿದಾಗ ತಮ್ಮ ಮೂರನೇ ಓವರ್ ನ ನಾಲ್ಕನೇ ಎಸೆತದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗದರು. ತಜ್ಞ ವೈದ್ಯರ ಸಂಪರ್ಕಿಸಿದ ಬಳಿಕ ಪಂದ್ಯದಿಂದ ಹೊರ ಉಳಿದರು. ಈಗಾಗಲೇ ಶಿಖರ್ ಧವನ್ ಗಾಯಗೊಂಡು ಪಂದ್ಯಗಳಿಗೆ ಅಲಭ್ಯರಾಗಿದ್ದು, ಇದೀಗ ಭುವನೇಶ್ವರ್ ಗಾಯಗೊಂಡಿದ್ದು, ತಂಡಕ್ಕೆ ಮತ್ತೊಂದು ಆಘಾತವಾಗಿದೆ.

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 140, ಕೆ.ಎಲ್.ರಾಹುಲ್ 57, ಕೊಹ್ಲಿ, 77, ಪಾಂಡ್ಯ 26, ಧೋನಿ 1, ವಿಜಯ್ ಶಂಕರ್ 15 (ಔಟಾಗದೆ) ಕೇದಾರ್ ಜಾಧವ್ 9 (ಔಟಾಗದೆ) ರನ್ ಕೆಲ ಹಾಕಿದರು. ಪಾಕಿಸ್ತಾನ ಬೌಲಿಂಗ್ ನಲ್ಲಿ ಮೊಹಮ್ಮದ ಅಮಿರ್ 10 ಓವರ್ ಗಳಲ್ಲಿ 47 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹಸನ್ ಅಲಿ ಮತ್ತು ವಹಬ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *