ಸೇನಾಸ್ಪತ್ರೆಯಿಂದ ಉಗ್ರ ಮಸೂದ್ ಅಜರ್ ಶಿಫ್ಟ್!

ನವದೆಹಲಿ: ಭಾನುವಾರ ಸಂಜೆ ಉಗ್ರ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಭಾರತದ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಪಾಕ್ ಮಾಧ್ಯಮಗಳು ಅಜರ್ ಸಾವನ್ನಪ್ಪಿಲ್ಲ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿವೆ. ಇದೀಗ ಅಂತರಾಷ್ಟ್ರೀಯ ಮಟ್ಟದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಪಾಕಿಸ್ತಾನ ಸೇನಾಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಸೂದ್ ಅಜರ್ ಪಾಕ್ ಸೇನಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು. ಭಾನುವಾರ ರಾತ್ರಿ ಸುಮಾರು 7.30ಕ್ಕೆ ಆತನನ್ನು ರಾವಲ್ಫಿಂಡಿಯಿಂದ ಬಹವಲಪುರ ಬಳಿಯ ಗೋಥ್ ಘನ್ನಿಯ ಜೈಶ್ ಶಿಬಿರಕ್ಕೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಹರಡಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ಜೈಶ್ ಸಂಘಟನೆ, ಮಸೂದ್ ಅಜರ್ ಚೆನ್ನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಐಎಎಫ್ ನಡೆಸಿದ ದಾಳಿಯಂದು ಅಜರ್ ಬಾಲಕೋಟ್ ಮದರಸಾದಲ್ಲಿದ್ದರು. ಘಟನೆಯಲ್ಲಿ ಮಸೂದ್ ಗೆ ಕೆಲ ಸಣ್ಣಪುಟ್ಟ ಗಾಯಗಳಾಗಿವೆ. ಭಾರತದ ಫೈಟರ್ ಜೆಟ್ ಗಳು ಸಿಡಿಸಿದ ಬಾಂಬ್ ಗಳನ್ನು ಅಲ್ಲಾಹನ ದೇವದೂತರು ಬೇರೆ ಸ್ಥಳದಲ್ಲಿ ಬೀಳುವಂತೆ ಮಾಡಿದ್ದಾರೆ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಮಸೂದ್ ಅಜರ್, ಭಾರತ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ದಾಳಿ ನಡೆದ ದಿನ ಫೆಬ್ರವರಿ 26ರಂದು ಆತ ಬಾಲಕೋಟ್ ಶಿಬಿರದಲ್ಲಿದ್ದನು. ದಾಳಿಯಲ್ಲಿ ಗಾಯಗೊಂಡಿದ್ದ ಆತನನ್ನು ಪಾಕ್ ಯಾರಿಗೂ ತಿಳಿಯದಂತೆ ಆಸ್ಪತ್ರೆಗೆ ರವಾನಿಸಿತ್ತು. ದಾಳಿಯಲ್ಲಿ ಮೃತ 250ಕ್ಕೂ ಅಧಿಕ ಉಗ್ರರ ಶವಗಳನ್ನು ಆಂಬುಲೆನ್ಸ್ ಮೂಲಕ ರವಾನಿಸಿ ಸತ್ಯವನ್ನು ಮುಚ್ಚಿಹಾಕುವ ಪ್ರಯತ್ನ ಪಾಕ್ ಮಾಡಿದೆ ಎಂದು ವರದಿಯಾಗಿತ್ತು.

https://www.youtube.com/watch?v=6lPsnuLxzKI

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *