ನವದೆಹಲಿ: ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆದ ಬಳಿಕ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನುವುದು ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ಈಗ ಪಾಕಿಸ್ತಾನ ಸೇನೆಯ ಅಧಿಕಾರಿಗಳೇ ಸುಮಾರು 200ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕ ಮೂಲದ ಕಾರ್ಯಕರ್ತ ಪ್ರಸ್ತುತ ಗಿಲ್ಗಿಟ್ ನಲ್ಲಿ ನೆಲೆಸಿರುವ ಸೆನೆಜ್ ಹಸ್ನಾನ್ ಈ ಸಂಬಂಧ ವಿಡಿಯೋ ಒಂದನ್ನು ಟ್ವೀಟ್ ಮಾಡಿ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿಯೊಬ್ಬರು ಬಾಲಕೋಟ್ ನಲ್ಲಿ 200ಕ್ಕೂ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ.
https://twitter.com/SengeHSering/status/1105660202337095681
ಸೆನೆಜ್ ಹಸ್ನಾನ್ ಪ್ರತಿಕ್ರಿಯಿಸಿ, ಜೈಶ್ ಸಂಘಟನೆ ಬಾಲಕೋಟ್ ನಲ್ಲಿ ಮದರಸಾ ನಡೆಯುತಿತ್ತು ಎನ್ನುವುದನ್ನು ಒಪ್ಪಿಕೊಂಡಿದೆ. ದಾಳಿ ನಡೆದ ನಂತರ ಮೃತಪಟ್ಟ ಉಗ್ರರ ದೇಹಗಳನ್ನು ಮರು ದಿನ ಖೈಬರ್ ಪಖ್ತೂಕ್ವಾ ಮತ್ತು ಬುಡಕಟ್ಟು ಜನ ವಾಸಿಸುವ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಸ್ಥಳಿಯ ಉರ್ದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಭಾರತ ಬಾಲಕೋಟ್ ಮೇಲೆ ನಡೆಸಿದ ದಾಳಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತದೆ. ಒಂದು ವೇಳೆ ದಾಳಿ ನಡೆಯದೇ ಇದ್ದಲ್ಲಿ ಇದೂವರೆಗೆ ದೇಶದ ಮಾಧ್ಯಮಗಳನ್ನು ಮತ್ತು ವಿದೇಶಿ ಮಾಧ್ಯಮಗಳನ್ನು ಸ್ಥಳಕ್ಕೆ ತೆರಳಲು ಅನುಮತಿ ನೀಡಿಲ್ಲ ಯಾಕೆ? ಘಟನೆ ನಡೆದು ಹಲವು ದಿನಗಳು ಕಳೆದರೂ ಇದೂವರೆಗೂ ಯಾರನ್ನು ಬಿಡಲಿಲ್ಲ. ಪಾಕ್ ಸರ್ಕಾರದ ಈ ವರ್ತನೆಗಳನ್ನು ನೋಡಿದಾಗ ಯಾವುದನ್ನೋ ಮರೆಮಾಚಲು ಮುಂದಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಸುರಿದು ಮೃತದೇಹ ಸುಟ್ಟರು – ಏರ್ ಸರ್ಜಿಕಲ್ ಸ್ಟ್ರೈಕ್‍ಗೆ ಸಿಕ್ತು ಆಡಿಯೋ ಸಾಕ್ಷ್ಯ!

ಬಾಲಕೋಟ್ ಉಗ್ರರ ನೆಲೆಯ ಮೇಲೆ ದಾಳಿ ನಡೆಸುವುದಕ್ಕೂ ಮೊದಲು 300 ಮೊಬೈಲ್ ಗಳು ಸಕ್ರಿಯವಾಗಿತ್ತು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ಎನ್‍ಟಿಆರ್‍ಒ) ದೃಢಪಡಿಸಿತ್ತು. ಭಾರತದ ದಾಳಿ ಬಳಿಕ ಪೆಟ್ರೋಲ್ ಹಾಕಿ ಪಾಕ್ ಸೇನೆ ಉಗ್ರರ ಮೃತ ದೇಹಗಳನ್ನು ಸುಟ್ಟು ಹಾಕಿದೆ ಎಂದು ವರದಿಯಾಗಿತ್ತು. ಇದನ್ನೂ ಓದಿ: 9 ದಿನಗಳಲ್ಲಿ 3ನೇ ಬಾರಿ ಪತ್ರಕರ್ತರಿಗೆ ನೋ ಎಂಟ್ರಿ: ಬಾಲಕೋಟ್ ಪ್ರದೇಶಕ್ಕೆ ಮಾಧ್ಯಮಗಳಿಗೆ ನಿಷೇಧ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply