ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದುಪಡಿಸಿರುವ ಬಗ್ಗೆ ಶಿವಸೇನೆ ಸೋಮವಾರ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ವಾಗ್ಧಾಳಿ ನಡೆಸಿದೆ. ಪಾಕಿಸ್ತಾನ ಐಸಿಯುನಲ್ಲಿದೆ, ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಚಿಂತೆ ಬಿಟ್ಟು ತಮ್ಮ ದೇಹದ ಬಗ್ಗೆ ಯೋಚಿಸಲಿ ಎಂದು ಟಾಂಗ್ ಕೊಟ್ಟಿದೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ ಈಗಾಗಲೇ ದೇಶ ತೀವ್ರ ನಿಗಾ ಘಟಕದಲ್ಲಿದೆ(ಐಸಿಯು). ಹೀಗಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಮೇಲೆ ಕೇಂದ್ರೀಕರಿಸುವ ಬದಲು ತಮ್ಮ ದೇಶದ ಸಮಸ್ಯೆ ಬಗೆಹರಿಸುವ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂದು ಎನ್‍ಡಿಎ ಘಟಕದ ಭಾಗವಾಗಿರುವ ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಪ್ರಕಟಿಸಿ ವ್ಯಂಗ್ಯವಾಡಿದೆ.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ನಡೆಯನ್ನು ತಡೆಯಲು ಚೀನಾ ಮತ್ತು ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‍ಎಸ್‍ಸಿ) ಮೊರೆ ಹೋಗಿತ್ತು. ಆದರೆ ಈ ಪ್ರಯತ್ನ ವಿಫಲವಾದ ಕಾರಣಕ್ಕೆ ಶಿವಸೇನಾ ಸಂಪಾದಕೀಯದಲ್ಲಿ ಎರಡೂ ದೇಶಗಳ ಬಗ್ಗೆ ಅಪಹಾಸ್ಯ ಮಾಡಿದೆ. ಯುಎನ್‍ಎಸ್‍ಸಿಯಲ್ಲಿ ನಡೆದ ಕ್ಲೋಸ್ ಡೋರ್ ಸಭೆಯನ್ನು ಉಲ್ಲೇಖಿಸಿ ಶಿವಸೇನೆ ಎರಡೂ ದೇಶಗಳ ಕಾಲೆಳೆದಿದೆ. ಜೊತೆಗೆ ಕೇಂದ್ರದ ನಡೆಯನ್ನು ಶ್ಲಾಘಿಸಿದೆ.
ಈ ಹಿಂದೆ ಪಾಕಿಸ್ತಾನದ ಪರವಾಗಿ ರ್ಯಾಲಿ ಮಾಡುವ ಮೂಲಕ ಚೀನಾಕ್ಕೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮುಜುಗರವಾಗಿತ್ತು. ಪಾಕಿಸ್ತಾನವು ಕಾಶ್ಮೀರದ ವಿಷಯದಲ್ಲಿ ಸ್ವಯಂ ಹಾನಿ ಮಾಡುವ ಅಭ್ಯಾಸವನ್ನು ಹೊಂದಿದೆ. ಹೀಗಾಗಿ ಯುಎನ್‍ಎಸ್‍ಸಿಯಲ್ಲಿ ಅದರ ವಿನಂತಿಯನ್ನು ರದ್ದುಗೊಳಿಸಿದರೂ, ಪಾಕ್ ಭಯ ಪಡುತ್ತಿದೆ ಮತ್ತು ದುಃಖಿಸುತ್ತಿದೆ. ಪಾಕಿಸ್ತಾನದ ಬೆದರಿಕೆ ‘ಟೊಳ್ಳು’ ಎಂದು ಶಿವಸೇನೆ ಟೀಕಿಸಿದೆ.
ಯುಎಸ್‍ನಿಂದ ಹೊಡೆತ ತಿಂದಿದ್ದರೂ, ಪಾಕಿಸ್ತಾನವು ಕಂಬದಿಂದ ಪೋಸ್ಟ್ ಗೆ ಚೀನಾ ಒದಗಿಸಿದ ‘ಆಮ್ಲಜನಕ’ ದಿಂದಾಗಿ ಓಡುತ್ತಿದೆ. ವಿಶ್ವಾದ್ಯಂತ ಕಾಶ್ಮೀರ ಸಮಸ್ಯೆಗಳನ್ನು ಹೆಚ್ಚಿಸುವ ಬದಲು ಪಾಕ್‍ನಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಬಡತನ ಮತ್ತು ಕಳಪೆ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಪ್ರಧಾನಿ ತಲೆಕೆಡಿಸಿಕೊಳ್ಳಬೇಕೆಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

Leave a Reply