ಭಾರತ ಮಿಸೈಲ್‌ ದಾಳಿಗೆ ಪಾಕ್‌ ತತ್ತರ – ಭಿಕ್ಷೆ ಬೇಡುತ್ತಿದೆ ʻಭಿಕಾರಿಸ್ತಾನʼ

– ಬ್ಯಾಂಕ್‌ಗಳಲ್ಲಿ ಹಣ ಖಾಲಿ, ಎಟಿಎಂ ಮಿತಿ 3,000 ರೂ.ಗೆ ಇಳಿಕೆ

ಇಸ್ಲಾಮಾಬಾದ್‌: ‌ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ (India) ದಿಟ್ಟ ಉತ್ತರ ನೀಡಿದೆ. ಭಾರತದ ಮಿಲಿಟರಿ ದಾಳಿಗೆ ತತ್ತರಿಸಿರುವ ಪಾಕ್‌ (Pakistan) ಇದೀಗ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ.

ಭಾರತದ ನಡೆಸಿದ ಮಿಸೈಲ್‌ ದಾಳಿಯಿಂದ ಪಾಕಿಸ್ತಾನದ ವಾಯುನೆಲೆ (Naval Base) ಸೇರಿದಂತೆ ಪಾಕ್‌ನ ಮೂಲಭೂತ ಸೌಕರ್ಯಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಆರ್ಥಿಕ ನಷ್ಟಕ್ಕೆ ತುತ್ತಾಗಿದೆ. ಹೀಗಾಗಿ ಇಸ್ಲಾಮಾಬಾದ್‌ (Islamabad) ಶುಕ್ರವಾರ ತುರ್ತು ಸಾಲ ನೀಡುವಂತೆ ವಿಶ್ವಬ್ಯಾಂಕ್‌ (World Bank) ಸೇರಿದಂತೆ ತನ್ನ ಅಂತರರಾಷ್ಟ್ರೀಯ ಪಾಲುದಾರರಿಗೆ ಮನವಿ ಮಾಡಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

ತನ್ನ ಎಕ್ಸ್‌ ಖಾತೆಯಲ್ಲಿ ಅಧಿಕೃತ ಸಂದೇಶ ಹಂಚಿಕೊಂಡಿರುವ ಪಾಕಿಸ್ತಾನ ಸರ್ಕಾರವು, ಶತ್ರುಗಳಿಂದ ಉಂಟಾದ ಭಾರೀ ನಷ್ಟದ ನಂತರ ಪಾಕಿಸ್ತಾನ ಸರ್ಕಾರ ಅಂತಾರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಮನವಿ ಮಾಡುತ್ತಿದೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರು ಕುಸಿತದ ಮಧ್ಯೆ, ಆರ್ಥಿಕ ದುಸ್ತರ ಕಡಿಮೆ ಮಾಡಲು ಸಹಾಯ ಮಾಡುವಂತೆ ಪಾಲುದಾರರನ್ನು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ಮನವಿ ಮಾಡುತ್ತಿದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

ಎಟಿಎಂಗಳಲ್ಲಿ ಹಣ ಡ್ರಾ ಮಿತಿ ಇಳಿಕೆ:
ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಮಾಸ್ಟರ್‌ ಸ್ಟ್ರೋಕ್‌ ಕೊಟ್ಟಿದೆ. ಪಾಕ್‌ನ 16 ಕಡೆ ಭಾರತದ ದಾಳಿಯಿಂದ ಮೂಲ ಸೌಕರ್ಯಗಳು ನಷ್ಟವಾಗಿದೆ. ಹಲವೆಡೆ ಬ್ಯಾಂಕ್‌ಗಳಲ್ಲೂ ಹಣ ಖಾಲಿಯಾಗಿದ್ದು, ಎಟಿಎಂಗಳಲ್ಲಿ ಹಣದ ಡ್ರಾ ಮಿತಿಯನ್ನು 3 ಸಾವಿರ ಪಾಕಿಸ್ತಾನಿ ರೂಪಾಯಿಗೆ ಇಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ