ದೇಶ ನಡೆಸಲು ದುಡ್ಡಿಲ್ಲದಿದ್ದರೂ ಪಾಕ್‍ನಿಂದ ಉಗ್ರ ಬುರ್ಹಾನ್ ವಾನಿ ಸ್ಟ್ಯಾಂಪ್ ಬಿಡುಗಡೆ

ಇಸ್ಲಾಮಬಾದ್: ದೇಶ ನಡೆಸಲು ದುಡ್ಡಿಲ್ಲ, ದೇವರೇ ನಮಗೆ ಈ ಬಿಕ್ಕಟ್ಟು ನೀಡಿದ್ದಾನೆ ಎಂದು ಬಹಿರಂಗವಾಗಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದ ಪಾಕ್ ಭಾರತೀಯ ಯೋಧರಿಂದ ಎನ್‍ಕೌಂಟರ್ ನಲ್ಲಿ ಹತ್ಯೆಯಾಗಿದ್ದ ಉಗ್ರ ಬುರ್ಹಾನ್ ವಾನಿಯನ್ನು ಸ್ವಾತಂತ್ರ್ಯ ಹೋರಾಟಗಾರನಾಗಿ ಬಿಂಬಿಸಿ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿದೆ.

ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, `ಕಾಶ್ಮೀರದಲ್ಲಿ ಭಾರತೀಯ ಪಡೆಗಳ ದೌರ್ಜನ್ಯಕ್ಕೆ ಬಲಿಯಾದ ಬಲಿಪಶು’ ಎಂಬ ಅರ್ಥದಲ್ಲಿ ಪಾಕ್ ಸರ್ಕಾರ ಆತನಿಗೆ ಸ್ವಾತಂತ್ರ್ಯ ಹೋರಾಟಗಾರನ ಸ್ಥಾನ ನೀಡಲು ಮುಂದಾಗಿದೆ. ಇದಕ್ಕಾಗಿ ಬುರ್ಹಾನ್ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿದೆ.

ಬುರ್ಹಾನ್ ಅಂಚೆಚೀಟಿ ಆನ್‍ಲೈನ್‍ನಲ್ಲೂ ಮಾರಾಟ ಮಾಡಲು ಪಾಕ್ ಯೋಜನೆ ರೂಪಿಸಿದ್ದು, ಒಂದು ಚೀಟಿಗೆ 6.99 ಯುಎಸ್ ಡಾಲರ್ (ಸುಮಾರು 500 ರೂ.) ನಿಗದಿ ಪಡಿಸಿದೆ. ಆದರೆ ಪಾಕಿಸ್ತಾನದಲ್ಲಿ ಬುರ್ಹಾನ್ ಅಂಚೆಚೀಟಿ 8 ಪಾಕ್ ರೂಪಾಯಿಗೆ ಲಭಿಸಲಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಓದಿ :  ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಭಾರತದ ಈನಂ ಗಂಭೀರ್ 

ಕೇವಲ ಬುರ್ಹಾನ್ ವಾಲಿ ಮಾತ್ರವಲ್ಲದೇ ಕಾಶ್ಮೀರದಲ್ಲಿ ಭಾರತೀಯ ಯೋಧರಿಂದ ಎನ್‍ಕೌಂಟರ್ ಆದ 19 ಉಗ್ರರ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಹಿಬ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಮುಖ್ಯಸ್ಥನಾಗಿದ್ದ ಬುರ್ಹಾನ್ ವಾನಿ ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಭಯೋತ್ಪಾದನ ಕೃತ್ಯ ನಡೆಸಲು ಸಂಚು ರೂಪಿಸಿದ್ದ. ಆದರೆ 2016ರ ಜುಲೈ 8ರಂದು ಕಾರ್ಯಾಚರಣೆ ನಡೆಸಿದ್ದ ಭಾರತದ ಯೋಧರು ಉಗ್ರ ಬುರ್ಹಾನ್ ವಾನಿಯನ್ನು ದಕ್ಷಿಣ ಕಾಶ್ಮೀರದಲ್ಲಿ ಕೊಂದು ಹಾಕಿದ್ದರು. ಬಳಿಕ ಈ ಘಟನೆ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಈ ಹಿಂಸಾಚಾರದಲ್ಲಿ 85 ಮಂದಿ ಸಾವನ್ನಪ್ಪಿದ್ದರು.

ಪಾಕ್ ಸರ್ಕಾರ ಉಗ್ರ ಬುರ್ಹಾನ್‍ನ್ನು ಸ್ವಾತಂತ್ರ್ಯ ಹೋರಾಟಗಾರರ ರೀತಿ ಬಿಂಬಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2017 ರಲ್ಲಿ ಪಾಕ್ ಸೇನಾ ಮುಖ್ಯಸ್ಥರು ತಮ್ಮ ಭಾಷಣದಲ್ಲಿ ಬುರ್ಹಾನ್ ಹೆಸರು ಪ್ರಸ್ತಾಪಿಸಿ, ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಇತರೇ ಯುವಕರಿಗೆ ಕಾಶ್ಮೀರ ಯುವರಿಗೆ ಸ್ಫೂರ್ತಿ ಆಗಲಿದ್ದಾರೆ ಎಂದು ಹೇಳಿದ್ದರು. ಇದನ್ನು ಓದಿ : ಬುರ್ಹಾನ್ ವಾನಿ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿದ ಯೋಧರು

ಸದ್ಯ ಪಾಕ್ ಸರ್ಕಾರ ಉಗ್ರರನ್ನು ವಿರುದ್ಧ ಕಾರ್ಯಾಚರಣೆ ನಡೆಸಲು ಅಮೆರಿಕ ಹೆಚ್ಚಿನ ಒತ್ತಡ ಹಾಕಿದೆ. ಈ ನಡುವೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಶಾಂತಿ ಮಾತುಕತೆ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಓದಿ:  ದೇಶ ನಡೆಸಲು ದುಡ್ಡಿಲ್ಲ, ನಮ್ಮನ್ನ ಬದಲಿಸಲು ದೇವರೇ ಬಿಕ್ಕಟ್ಟು ಸೃಷ್ಟಿಸಿದ್ದಾನೆ-ಇಮ್ರಾನ್ ಖಾನ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *