ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ – 39 ಮಂದಿ ಬಲಿ, 200ಕ್ಕೂ ಹೆಚ್ಚು ಮಂದಿಗೆ ಗಾಯ

ಪೇಶಾವರ: ರಾಜಕೀಯ ಕಾರ್ಯಕ್ರಮದಲ್ಲಿ ಬಾಂಬ್‌ ಸ್ಫೋಟಗೊಂಡ (Bomb Blast) ಪರಿಣಾಮ ಕನಿಷ್ಠ 39 ಮಂದಿ ಸಾವನ್ನಪ್ಪಿ 200 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನ ಅಫ್ಘಾನಿಸ್ತಾನ ಗಡಿಯ (Pakistan-Afghanistan Border) ಸಮೀಪವಿರುವ ಖಾರ್ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದಲ್ಲಿ  ಧಾರ್ಮಿಕವಾಗಿ ಹೆಚ್ಚು ಗುರುತಿಸಿಕೊಂಡಿದ್ದ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (Jamiat Ulema-e-Islam-F) ರಾಜಕೀಯ ಪಕ್ಷದ ಕಾರ್ಯಕ್ರಮ ನಡೆಯುತ್ತಿತ್ತು. ಟೆಂಟ್‌ ಒಳಗಡೆ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಈ ದಾಳಿಯಲ್ಲಿ ಸ್ಥಳೀಯ ಜೆಯುಎಲ್‌-ಎಫ್‌ ನಾಯಕ ಮೃತಪಟ್ಟಿದ್ದಾರೆ.

https://twitter.com/AqssssFajr/status/1685660799082045440

ಆಸ್ಪತ್ರೆಯಲ್ಲಿ 39 ಮೃತ ದೇಹಗಳಿವೆ. 123 ಮಂದಿ ಗಾಯಗೊಂಡಿದ್ದು ಈ ಪೈಕಿ 17 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಆರೋಗ್ಯ ಸಚಿವ ರಿಯಾಜ್ ಅನ್ವರ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾಸ್ಕೋ ಮೇಲೆ ಡ್ರೋನ್‌ ದಾಳಿ – ಇದು ಉಕ್ರೇನ್‌ ಕೃತ್ಯ ಎಂದ ರಷ್ಯಾ

ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಪಾಕಿಸ್ತಾನದಲ್ಲಿರುವ ತೆಹ್ರಿಕ್‌ ಇ ತಾಲಿಬಾನ್‌ (Tehreek-e-Taliban) ಸಂಘಟನೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅಲ್ಲಿನ ಸೈನಿಕರ ವಿರುದ್ಧ ಈ ಹಿಂದೆ ದಾಳಿ ನಡೆಸಿತ್ತು.

ಜನವರಿಯಲ್ಲಿ ಪಾಕಿಸ್ತಾನದ ತಾಲಿಬಾನ್‌ಗೆ ಸಂಬಂಧ ಹೊಂದಿರುವ ಆತ್ಮಹತ್ಯಾ ಬಾಂಬರ್ ವಾಯುವ್ಯ ನಗರದ ಪೇಶಾವರ್‌ನ ಪೊಲೀಸ್ ಆವರಣದೊಳಗಿನ ಮಸೀದಿಯೊಂದರಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಈ ದಾಳಿಯಲ್ಲಿ 80 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದಲ್ಲಿ ಉಗ್ರ ದಾಳಿ ನಡೆಯುತ್ತಿದೆ.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]