ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್‌ – ದಾವಣಗೆರೆಯ ಪಾಕ್ ಸೊಸೆ ಚೆನ್ನೈನಲ್ಲಿ ಅರೆಸ್ಟ್‌

– ದಾವಣಗೆರೆ ಮೂಲದ ವ್ಯಕ್ತಿಯಿಂದಲೇ ಪಾಕ್ ಮೂಲದವರಿಗೆ ಆಶ್ರಯ

ದಾವಣಗೆರೆ: ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಬಂದು, ಹಿಂದೂಗಳ (Hindu) ಹೆಸರಿಟ್ಟುಕೊಂಡು ಅಕ್ರಮವಾಗಿ ನೆಲೆಸಿದ್ದ ಪಾಕ್‌ ಮೂಲದ ಮಹಿಳೆ ಹಾಗೂ ದಾವಣಗೆರೆ (Davanagere) ಮೂಲದ ವ್ಯಕ್ತಿ ಚೆನ್ನೈನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಇವರು ಮೆಹೆದಿ ಫೌಂಡೇಷನ್ ಇಂಟರ್ ನ್ಯಾಷನಲ್ ಸಂಘಟನೆ ಸದಸ್ಯರಾಗಿದ್ದರು. ಇಸ್ಲಾಂ ಧರ್ಮ ಪ್ರಸಾರಕ್ಕಾಗಿ ಆರಂಭವಾದ ಬಾಂಗ್ಲಾದ (Bangladesh) ವಾಹಿನಿಯೊಂದರಲ್ಲಿ ಬರುವ ಕಾರ್ಯಕ್ರಮವನ್ನು ವೀಕ್ಷಣೆ ಮಾಡುವಂತೆ ಸ್ಥಳೀಯ ಮುಸ್ಲಿಂ ಸಮಾಜದವರಿಗೆ ಪ್ರೇರೇಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ –  ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

ಮಂಗಳವಾರ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಠಾಣೆಯ ಪೊಲೀಸರು ನಾಲ್ವರನ್ನ ಬಂಧಿಸಿದ್ದರು. ಇವರು ಜಿಗಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಜಾಪೂರ ಗ್ರಾಮದಲ್ಲಿ ವಾಸವಿದ್ದರು. ಈ ಪ್ರಕರಣ ಹೊರ ಬಿದ್ದ ಬೆನ್ನಲ್ಲೇ ನಕಲಿ ದಾಖಲೆ ಸೃಷ್ಠಿಸಿ ನೆಲೆಸಿದ್ದ ದಾವಣಗೆರೆ ಮೂಲದ ಅಲ್ತಾಫ್‌ ಹಾಗೂ ಆತನ ಹೆಂಡತಿ ಪಾಕ್‌ ಮೂಲದ ಫಾತಿಮಾ ಚೆನ್ನೈನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಹಿಂದೆ ಹೋಗು ಎಂದಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ ಹೊಟ್ಟೆಗೆ ಚಾಕು ಇರಿದ ಯುವಕ

ಅಲ್ತಾಫ್‌ ತಂದೆ ಖಲಂದರಸಾಬ್ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿದ್ದರು. ದಾವಣಗೆರೆ ನಗರದ ಶಿವಕುಮಾರ ಬಡಾವಣೆಯಲ್ಲಿ ಜೆಕೆ ಮಂಜಿಲ್ ಎಂಬಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಖಲಂದರ ಸಾಬ್ ಬೆಂಗಳೂರಿಗೆ ವರ್ಗಾವಣೆ ಆದ ಬಳಿಕ ಕುಟುಂಬ ಬೆಂಗಳೂರಿನಲ್ಲಿದೆ. ಅವರ ಮೂರು ಜನ ಮಕ್ಕಳಲ್ಲಿ ಈಗ ಚೆನ್ನೈನಲ್ಲಿ ಬಂಧನಕ್ಕೊಳಗಾದ ಅಲ್ತಾಫ್‌ ಕೂಡ ಒಬ್ಬ ಎಂಬುದು ಆಘಾತಕಾರಿ ವಿಚಾರ. ಇತ್ತ ಫಾತಿಮಾ ಎಂಬ ಪಾಕ್ ಮೂಲಕ ಯುವತಿಯನ್ನ ಮದ್ವೆ ಆಗಿದ್ದಾನೆ. ಬಾಂಗ್ಲಾ ದೇಶಕ್ಕೆ ಹೋಗಿ ವಾಪಸ್‌ ಬರುವಾಗ ಈತ ಚೆನ್ನೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇವರಿಬ್ಬರು ಇಸ್ಲಾಂ ಧರ್ಮದ ಬಗ್ಗೆ ಪ್ರಚಾರ ಮಾಡುವ ಮೆಹೆದಿ ಫೌಂಡೇಷನ್ ಇಂಟರ್ ನ್ಯಾಷನಲ್ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಫಾತಿಮಾಳನ್ನು ಮದುವೆಯಾದ ಬಳಿಕ ಅವಳ ತಂದೆ, ತಾಯಿ, ಅಣ್ಣ ಅತ್ತಿಗೆಯನ್ನ ಪಾಕ್ ಮತ್ತು ಬಾಂಗ್ಲಾದಿಂದ ಮೊದಲು ದೆಹಲಿ ನಂತರ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅಲ್ಲದೇ ಪಾಕ್ ಮೂಲದ ಮಹಿಳೆಗೆ ದಾವಣಗೆರೆಯ ನಿವಾಸದ ವಿಳಾಸದಲ್ಲೇ ಪಾಸ್‌ಪೋರ್ಟ್‌ ದಾಖಲೆಗಳನ್ನು ಮಾಡಿಸಿಕೊಟ್ಟಿದ್ದರು ಎಂಬ ರಹಸ್ಯವೂ ತನಿಖೆಯಲ್ಲಿ ಬಯಲಾಗಿದೆ.

ಪಾಕ್‌ ಮೂಲದ ಪ್ರಜೆಗಳು 2018ರಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ದೆಹಲಿಯಲ್ಲಿ ನಕಲಿ ಆಧಾರ್‌ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಯಾರಿಗೂ ಸಂಶಯ ಬಾರದಿರಲಿ ಎಂದು ಹಿಂದೂಗಳ ಹೆಸರಿಟ್ಟುಕೊಂಡು ಜೀವನ ನಡೆಸುತ್ತಿದ್ದರು. ರಶೀದ್ ಅಲಿ ಸಿದ್ದೀಕಿ ಅಲಿಯಾಸ್ ಶಂಕರ್ ಶರ್ಮಾ, ಪಾಕಿಸ್ತಾನದ ಕರಾಚಿ ಮೂಲದವರು. ಆಯೆಷಾ ಅಲಿಯಾಸ್ ಆಶಾರಾಣಿ, ಹನೀಫ್ ಮೊಹಮ್ಮದ್‌ ಅಲಿಯಾಸ್ ರಾಮ್ ಬಾಬು ಶರ್ಮಾ, ರುಬೀನಾ ಅಲಿಯಾಸ್ ರಾಣಿ ಶರ್ಮಾ ಲಾಹೋರ್‌ ಮೂಲದವರು. ಈ ನಾಲ್ವರನ್ನ ಜಿಗಣಿ ಪೊಲೀಸರು ಬಂಧಿಸಿದ್ದರು.

ಅಲ್ತಾಫ್‌ ಮತ್ತು ಫಾತಿಮಾ ದಂಪತಿ ಇಲ್ಲಿನ ಮುಸ್ಲಿಂ ಸಮಾಜದವರಿಗೆ ಮುಸ್ಲಿಂ ಪ್ರಚಾರ ಕಾರ್ಯಕ್ರಮಗಳನ್ನು ನೋಡುವಂತೆ ಪ್ರೇರೇಪಿಸುತ್ತಿದ್ದರು. ಈ ಕೆಲಸಕ್ಕಾಗಿ ಇವರಿಗೆ ಫಂಡಿಂಗ್‌ ಕೂಡ ಬರುತ್ತಿತ್ತು. ಸದ್ಯ ಇಬ್ಬರನ್ನು ಬಂಧಿಸಿರುವ ತನಿಖಾ ಸಂಸ್ಥೆಗಳು ಅಲ್ತಾಫ್‌ ಮನೆಯಲ್ಲಿ ಪರಿಶೀಲನೆ ನಡೆಸಿವೆ. ದಾವಣಗೆರೆ ಪೊಲೀಸರು ಕೂಡ ಅಲರ್ಟ್‌ ಆಗಿದ್ದು, ನಕಲಿ ಪಾಸ್‌ಪೋರ್ಟ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.