‘ಆಪರೇಷನ್‌ ಸಿಂಧೂರ’ಗೆ ಪಾಕ್‌ ವಾಯುಪಡೆ ಮುಖ್ಯ ತಂತ್ರಜ್ಞ ಸೇರಿ 11 ಸೈನಿಕರು ಸಾವು

ಇಸ್ಲಾಮಾಬಾದ್: ಭಾರತದ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಗೆ ಪಾಕ್‌ ತತ್ತರಿಸಿ ಹೋಗಿದೆ. ಪಾಕಿಸ್ತಾನದ (Pakistan Soldiers) 11 ಸೈನಿಕರು ಸೇರಿದಂತೆ 40 ನಾಗರಿಕರು ಬಲಿಯಾಗಿದ್ದಾರೆ.

ಏ.22 ರಿಂದ ಮೇ 10ರ ವರೆಗೆ ಪಾಕಿಸ್ತಾನ ಮಾರ್ಕಾ-ಎ-ಹಕ್‌ (ಸತ್ಯ ಕದನ) ನಡೆಸಿದೆ ಎಂದು ಪಾಕ್‌ ಸೇನೆಯು ಹೇಳಿಕೊಂಡಿದೆ. ಪಾಕಿಸ್ತಾನದ ಇಂಟರ್‌-ಸರ್ವೀಸಸ್‌ ಪಬ್ಲಿಕ್‌ ರಿಲೇಶನ್ಸ್‌ (ಐಎಸ್ಪಿಆರ್‌) 11 ಮಂದಿ ಪೈಕಿ, 6 ಸಿಬ್ಬಂದಿ ಸೇನೆ ಮತ್ತು 5 ಸಿಬ್ಬಂದಿ ವಾಯುಪಡೆಗೆ ಸೇರಿದವರು ಎಂದು ಪಾಕ್‌ ತಿಳಿಸಿದೆ. ಇದನ್ನೂ ಓದಿ: Photo Gallery: ‘ಆಪರೇಷನ್‌ ಸಿಂಧೂರ’ ವೀರರನ್ನು ಭೇಟಿಯಾದ ಪಿಎಂ ಮೋದಿ

ಪಾಕಿಸ್ತಾನವು 36 ಸ್ಥಳಗಳಲ್ಲಿ ಭಾರತೀಯ ವಾಯುಪ್ರದೇಶವನ್ನು ಒಳನುಸುಳಲು ಪ್ರಯತ್ನಿಸಿದಾಗ ಭಾರತವು ಒಂದು ಎಫ್ -16 ಮತ್ತು ಎರಡು ಜೆಎಫ್ -17 ಫೈಟರ್ ಜೆಟ್‌ಗಳನ್ನು ಮೇ 8-9ರ ಮಧ್ಯಂತರದಲ್ಲಿ ಹೊಡೆದುರುಳಿಸಿದೆ ಎಂದು ಮೂಲಗಳು ಹೇಳಿಕೊಂಡಿವೆ.

ಮೇ 7 ರಿಂದ 10 ರ ನಡುವೆ ಪಾಕಿಸ್ತಾನದ ಸೇನೆಯ ಕನಿಷ್ಠ 35 ರಿಂದ 40 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆಯು ಹೇಳಿದೆ. ಉಭಯ ದೇಶಗಳ ಸಂಘರ್ಷದಲ್ಲಿ ಭಾರತದ ಐವರು ಯೋಧರು ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಮೂವರು ಉಗ್ರರು ಮಟಾಶ್‌

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರರ ನೆಲೆಗಳನ್ನು ಭಾರತ ಉಡೀಸ್‌ ಮಾಡಿತು. ಭಾರತದ ದಾಳಿಗೆ 100 ಉಗ್ರರು ಹತರಾಗಿದ್ದಾರೆ.