ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ – 9 ಪೊಲೀಸರು ಸಾವು

ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಬಲೂಚಿಸ್ತಾನ್ (Balochistan blast) ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಒಂಭತ್ತು ಪೊಲೀಸರು (Pakistan Police) ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದ ಸಿಬ್ಬಿ ನಗರದಲ್ಲಿ ಈ ದಾಳಿ ನಡೆದಿದೆ. ಬಲೂಚಿಸ್ತಾನ್ ಕಾನ್‌ಸ್ಟಾಬ್ಯುಲರಿಯ ಸದಸ್ಯರು ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಪೊಲೀಸ್‌ ಟ್ರಕ್‌ಗೆ ಮೋಟಾರ್‌ ಬೈಕ್‌ ಡಿಕ್ಕಿ ಹೊಡೆದು ದಾಳಿ ಮಾಡಯಿತು. ಪರಿಣಾಮ ಪೊಲೀಸರು ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾಗಿದೆ. ಇದನ್ನೂ ಓದಿ: ʼಸ್ವೀಟ್‌ 16ʼ ಬರ್ತ್‌ಡೇ ಪಾರ್ಟಿಯಲ್ಲಿ ಶೂಟೌಟ್‌ – ಇಬ್ಬರು ಸಾವು, 6 ಮಂದಿಗೆ ಗಾಯ

ಆತ್ಮಹತ್ಯಾ ಬಾಂಬರ್ ಮೋಟಾರ್‌ ಬೈಕನ್ನು ಚಲಾಯಿಸುತ್ತಿದ್ದ. ಹಿಂದಿನಿಂದ ಬಂದು ಟ್ರಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ 9 ಪೊಲೀಸರು ಮೃತಪಟ್ಟಿದ್ದಾರೆ. ದಾಳಿಯಲ್ಲಿ 7 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ಹೈ ಅಮೀರ್ ತಿಳಿಸಿದ್ದಾರೆ.

ದಾಳಿ ಸ್ಥಳದ ಭೀಕರ ದೃಶ್ಯದ ಛಾಯಾಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ರಕ್ತಸಿಕ್ತ ದೇಹಗಳು, ಉರುಳಿಬಿದ್ದ ಬಿಳಿ ಮತ್ತು ನೀಲಿ ಬಣ್ಣದ ಪೊಲೀಸ್ ವ್ಯಾನ್‌ನ ಭಯಾನಕ ದೃಶ್ಯ ಛಾಯಾಚಿತ್ರದಲ್ಲಿದೆ. ಪಾಕಿಸ್ತಾನದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲಿನ ಸರಣಿ ದಾಳಿಯಲ್ಲಿ ಇದು ಇತ್ತೀಚಿನದು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ

ಬಲೂಚಿಸ್ತಾನ ಮುಖ್ಯಮಂತ್ರಿ ಮಿರ್ ಅಬ್ದುಲ್ ಖುದೂಸ್ ಬಿಜೆಂಜೊ ಅವರು ದಾಳಿಯನ್ನು ಖಂಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಈವರೆಗೂ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

Comments

Leave a Reply

Your email address will not be published. Required fields are marked *