PAK Vs AUS: 24 ವರ್ಷಗಳ ಬಳಿಕ ಪಾಕ್ ಪ್ರವಾಸ ಕೈಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

ಇಸ್ಲಾಮಾಬಾದ್: ಪಾಕಿಸ್ತಾನ ವಿರುದ್ಧ ಟೆಸ್ಟ್, ಟಿ20 ಮತ್ತು ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡ 24 ವರ್ಷಗಳ ಬಳಿಕ ಇಸ್ಲಾಮಾಬಾದ್‍ಗೆ ಬಂದಿಳಿದಿದೆ.

ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಮತ್ತು ಏಕದಿನ ಸರಣಿ ಹಾಗೂ ಏಕೈಕ ಟಿ20 ಸರಣಿಗಾಗಿ ಆಸ್ಟ್ರೇಲಿಯಾ 6 ವಾರಗಳ ಪ್ರವಾಸ ಕೈಗೊಂಡಿದೆ. ಈ ಹಿಂದೆ ಆಸ್ಟ್ರೇಲಿಯಾ 1998ರಲ್ಲಿ ಪಾಕ್ ಪ್ರವಾಸ ಕೈಗೊಂಡು ಏಕೈಕ ಟೆಸ್ಟ್ ಮತ್ತು ನಿಗದಿತ ಓವರ್‌ಗಳ ಸರಣಿ ಗೆದ್ದಿತ್ತು. ಆ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರಲಿಲ್ಲ. ಇದೀಗ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದಲ್ಲಿ ಬಿಡುಬಿಟ್ಟಿದೆ. ಇದನ್ನೂ ಓದಿ: ಮಹಿಳಾ ಏಕದಿನ ವಿಶ್ವಕಪ್: ಸ್ಮೃತಿ ಮಂಧಾನಗೆ ಗಾಯ

2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ಮಾಡಿದ ಘಟನೆಯ ಬಳಿಕ ಯಾವುದೇ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿರಲಿಲ್ಲ. ಕಳೆದ ವರ್ಷ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಂಡರೂ ಭದ್ರತಾ ಎಚ್ಚರಿಕೆ ಹಿನ್ನೆಲೆ ಸರಣಿಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ತಮ್ಮ, ತಮ್ಮ ದೇಶಗಳಿಗೆ ಹಿಂದಿರುಗಿದ್ದವು. ಇದನ್ನೂ ಓದಿ: ಇಂದಿನ ಟಿ20 ಪಂದ್ಯಕ್ಕೆ ಮಳೆಯಾಗಲ್ಲ – ಸತತ 11 ಪಂದ್ಯ ಗೆದ್ದು ಬೀಗಿದ ಭಾರತ

ಇದೀಗ ಆಸ್ಟ್ರೇಲಿಯಾ ತಂಡ ಪಾಕ್ ಪ್ರವಾಸ ಕೈಗೊಂಡಿದ್ದು, ಮಾರ್ಚ್ 4 ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ. ಆಸ್ಟ್ರೇಲಿಯಾ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಗಿಭದ್ರತೆ ಕಲ್ಪಿಸಿದ್ದು, 4,000 ಪೊಲೀಸ್ ಮತ್ತು ಮಿಲಿಟರಿ ಪಡೆಯ ಭದ್ರತೆ ಒದಗಿಸಿದೆ. ಬಿಗಿ ಭದ್ರತೆಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ಸರಣಿ ನಡೆಯಲಿದೆ.

Comments

Leave a Reply

Your email address will not be published. Required fields are marked *