ಒಂದೇ ದಿನದಲ್ಲಿ 85 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾದ ಪದ್ಮಾವತಿಯ `ಘೂಮರ್’ ಸಾಂಗ್

ಮುಂಬೈ: ಟ್ರೇಲರ್ ಮೂಲಕವೇ ಭಾರತೀಯ ಸಿನಿರಂಗದಲ್ಲಿ ಧೂಳೆಬ್ಬೆಸಿರೋ ಕನ್ನಡತಿ ದೀಪಿಕಾ ಪಡುಕೋಣೆ ನಟನೆಯ `ಪದ್ಮಾವತಿ’ ಚಿತ್ರದ ಮೊದಲ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಬಿಡುಗಡೆಗೊಂಡ ಒಂದೇ ದಿನದಲ್ಲಿ 85 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು, ನಂಬರ್ 01 ಟ್ರೆಂಡಿಂಗ್ ನಲ್ಲಿದೆ.

ಘೂಮರ್ ಹಾಡಿನಲ್ಲಿ ದೀಪಿಕಾ ರಾಣಿ ಪದ್ಮಿನಿಯಾಗಿ ಮಿಂಚಿದರೆ, ಶಾಹಿದ ಕಪೂರ್ ರಜಪೂತ ರಾಜನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಘೂಮರ್ ಡಾನ್ಸ್ ನಲ್ಲಿ ಬನ್ಸಾಲಿ ತಮ್ಮ ಕೈಚಳಕವನ್ನು ತೋರಿಸಿದ್ದು, ಹಾಡು ಅಪ್ಪಟ ರಾಜಸ್ಥಾನಿ ಶೈಲಿಯಲ್ಲಿ ಮೂಡಿಬಂದಿದೆ. ದೀಪಿಕಾ ಕೆಂಪು ಬಣ್ಣದ ಲೆಹಂಗಾದಲ್ಲಿ ಡಾನ್ಸ್ ಮಾಡುವುದನ್ನು ನೋಡುವುದೇ ಒಂದು ಖುಷಿ.

ಈ ಹಿಂದೆ ರಾಮ್ ಲೀಲಾ ಸಿನಿಮಾದಲ್ಲೂ ದೀಪಿಕಾ `ನಗಾಡ ಸಂಗ್ ಡೋಲ್ ಬಾಜೆ’ ಹಾಡಿನಲ್ಲಿ ಕೆಂಪು ಲಹೆಂಗಾ ಹಾಕಿ ಕುಣಿದಿದ್ದರು. ಅಂದಿನ ಹಾಡಿಗೂ ಈ ಘೂಮರ್ ಹಾಡಿಗೂ ತುಂಬಾ ವ್ಯತ್ಯಾಸಗಳನ್ನು ನೋಡಬಹುದಾಗಿದೆ. ರಾಜಸ್ಥಾನಿಯ ಸರಳ ಡ್ಯಾನ್ಸ್ ಮೂವ್‍ಮೆಂಟ್ ಗಳಲ್ಲಿ ದೀಪಿಕಾ ಘೂಮರ್ ನೃತ್ಯಕ್ಕೆ ಗೆ ಜೀವ ತುಂಬಿದ್ದಾರೆ. ಹಾಡಿನಲ್ಲಿ ದೀಪಿಕಾ ಭಾರೀ ತೂಕದ ಆಭರಣಗಳನ್ನು ಧರಿಸಿ 66 ಬಾರಿ ಸುತ್ತಗಳನ್ನು ಹಾಕಿದ್ದಾರೆ.

ಹಾಡಿನ ಸಾಹಿತ್ಯ ಎ.ಎಂ.ತುರಾಜ್ ಲೇಖನಿಯಲ್ಲಿ ಮೂಡಿಬಂದಿದ್ದು, ಶ್ರೇಯಾ ಘೋಷಾಲ್ ಮತ್ತು ಸ್ವರೂಪ್ ಖಾನ್ ಸಂಗಡಿಗರು ಹಿನ್ನಲೆ ಧ್ವನಿಯಾಗಿದ್ದಾರೆ. ಕೃತಿ ಮಹೇಶ್ ಮಿದ್ಯಾ, ಘೂಮರ್ ನೃತ್ಯದ ಕಲಾವಿದೆ ಜ್ಯೋತಿ ಡಿ. ತೊಮ್ಮರ್ ಅವರಿಂದ ದೀಪಿಕಾ ಈ ರಾಜಸ್ಥಾನಿ ಜನಪದ ಶೈಲಿಯ ನೃತ್ಯವನ್ನು ಕಲಿತಿದ್ದಾರೆ.

ಇದನ್ನೂ ಓದಿ: ಪದ್ಮಾವತಿ ರಂಗೋಲಿ ವಿವಾದ- 48 ಗಂಟೆ ಸಮಯದಲ್ಲಿ ಬಿಡಿಸಿದ್ದ ರಂಗೋಲಿಯನ್ನು ಅಳಿಸಿದ್ದ ಆರೋಪಿಗಳ ಅರೆಸ್ಟ್

ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಮಾಹಾರಾವಲ್ ರತನ್ ಸಿಂಗ್ ನಾಗಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 1ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ: `ಪದ್ಮಾವತಿ’ ಲೆಹೆಂಗಾದ ತೂಕ ಕೇಳಿದರೆ ಶಾಕ್ ಆಗ್ತೀರಿ!

Comments

Leave a Reply

Your email address will not be published. Required fields are marked *