BBK 11: ದೊಡ್ಮ,ನೆ ಎಂಟ್ರಿ ಕೊಡಲಿದ್ದಾರೆ ಮೋಕ್ಷಿತಾ ಪೈ

ಬಿಗ್‌ ಬಾಸ್‌ ಮನೆಗೆ ಕಿರುತೆರೆಯ ಜನಪ್ರಿಯ ನಟಿ ಮೋಕ್ಷಿತಾ ಪೈ (Mokshitha Pai) ಎಂಟ್ರಿ ಕೊಟ್ಟಿದ್ದಾರೆ. ‘ಪಾರು’ (Paaru) ಸೀರಿಯಲ್‌ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ನಟಿ ದೊಡ್ಮನೆ ಆಟದಲ್ಲಿ ಸ್ಪರ್ಧಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಇದನ್ನೂ ಓದಿ:BBK 11: ನಾನು ಬಿಗ್‌ ಬಾಸ್‌ಗೆ ಹೋಗುತ್ತಿಲ್ಲ- ಕಿರಣ್‌ ರಾಜ್‌ ಸ್ಪಷ್ಟನೆ

ಕರಾವಳಿ ಬೆಡಗಿ ಮೋಕ್ಷಿತಾ ಪೈ ಬಿಗ್‌ ಬಾಸ್‌ ಬರುವ ಬಗ್ಗೆ ಹಲವು ದಿನಗಳಿಂದ ಗುಸು ಗುಸು ಶುರುವಾಗಿತ್ತು. ಬಿಗ್‌ ಬಾಸ್‌ಗೆ ಬರುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಈಗ ದೊಡ್ಮನೆ ಆಟದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಆದರೆ ಸ್ವರ್ಗ ನಾ? ಅಥವಾ ನರಕದ ಥೀಮ್‌ನಲ್ಲಿ ಅವರು ಇರುತ್ತಾರಾ? ಎಂಬುದು ಈಗ ಪ್ರೇಕ್ಷಕರು ನಿರ್ಧರಿಸಲಿದ್ದಾರೆ. ಇದರ ಅಧಿಕೃತ ಅನಾವರಣ ‘ಬಿಗ್‌ ಬಾಸ್‌ ಕನ್ನಡ 11’ರ ಚಾಲನೆ ದಿನ ಸಿಗಲಿದೆ. ಅಂದರೆ ಸೆ.29ರಂದು ಸಿಹಿಸುದ್ದಿ ಸಿಗಲಿದೆ.

https://youtu.be/oTCWjSqTiSk?si=is_Ak17l7NkH4Enr

ಇನ್ನೂ ಐದಾರು ವರ್ಷಗಳ ಹಿಂದೆ ‘ಪಾರು’ ಸೀರಿಯಲ್‌ನಲ್ಲಿ ನಾಯಕಿಯಾಗಿ ಶರತ್‌ ಜೊತೆ ಮಿಂಚಿದ್ದರು. ಅಖಿಲಾಡೇಶ್ವರಿ ಪಾತ್ರಧಾರಿ ವಿನಯಾ ಪ್ರಸಾದ್‌ ಸೊಸೆ ಪಾತ್ರದಲ್ಲಿ ಜೀವತುಂಬಿದ್ದರು ಮೋಕ್ಷಿತಾ ಪೈ. ಈಗ ಬಿಗ್‌ ಬಾಸ್ ಕನ್ನಡ 11ರಲ್ಲಿ ಗೆಲ್ಲಲು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.