ಲಂಡನ್: ಪಾಕಿಸ್ತಾನ ಸಿರಿಯಾ ದೇಶಕ್ಕಿಂತ ಮಾನವಕುಲಕ್ಕೆ ಅಪಾಯ ತಂದ್ದೊಡುವ ಅಪಾಯಕಾರಿ ದೇಶ ಎಂಬುದಾಗಿ ನೂತನ ಅಧ್ಯಯನವೊಂದು ತಿಳಿಸಿದೆ.
ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಭಾರತ ಹೇಳುತ್ತಾ ಬಂದಿದ್ದರೂ ಅದನ್ನು ಅಲ್ಲಗೆಳೆಯುತ್ತಿರುವ ಪಾಕಿಸ್ತಾನದ ನೈಜ ಮುಖವಾಡ ಈಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ಟ್ರಾಟೆಜಿಕ್ ಫೊರೆಟೈಟ್ ಗ್ರೂಪ್ (ಎಸ್‍ಎಫ್‍ಜಿ) ಅಧ್ಯಯನದಲ್ಲಿ ಕಳಚಿ ಬಿದ್ದಿದೆ.
“ಹ್ಯುಮಾನಿಟಿ ಅಟ್ ರಿಸ್ಕ್- ಗ್ಲೋಬಲ್ ಟೆರೆರ್ ಥ್ರೆಟ್ ಇಂಡಿಕೆಂಟ್” ಶೀರ್ಷಿಕೆ ಅಡಿ ಪ್ರಕಟಗೊಂಡ ವರದಿಯಲ್ಲಿ, ಪಾಕಿಸ್ತಾನದಲ್ಲಿ ಅತೀ ಹೆಚ್ಚು ಉಗ್ರ ಸಂಘಟನೆಗಳು ಇದ್ದು, ಅಘ್ಘಾನ್, ತಾಲಿಬಾನ್ ಮತ್ತು ಲಷ್ಕರ್ – ಇ- ತೊಯ್ಬಾ ಅಂತರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಭಯೋತ್ಪಾದಕ ಸಂಘಟನೆಯಾಗಿದೆ. ಪಾಕಿಸ್ತಾನ ಈ ಉಗ್ರರಿಗೆ ತನ್ನ ದೇಶದಲ್ಲಿ ಆಶ್ರಯ ನೀಡಿ, ಜಗತ್ತಿನ ಅತೀ ಅಪಾಯಕಾರಿ ದೇಶವಾಗಿ ಹೊರಹೊಂದಿದೆ ಎನ್ನುವ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ.

ತಾಲಿಬಾನ್ ಸೇರಿದಂತೆ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ, ಅವರಿಗೆ ಎಲ್ಲಾ ರೀತಿಯ ಬೆಂಬಲವನ್ನ ನೀಡುತ್ತಿದೆ. ಮುಂದಿನ 2030 ವರ್ಷಕ್ಕೆ, ಹೆಚ್ಚುತ್ತಿರುವ ಉಗ್ರರ ದಾಳಿ ಮತ್ತು ಶಸ್ತ್ರಾಸ್ತ್ರಗಳ ದುರ್ಬಳಕೆಯ ಪರಿಣಾಮ ಮಾನವ ಕುಲದ ಉನ್ನತಿ ಮತ್ತು ಜೀವನ ವಿನಾಶದ ಅಂಚನ್ನು ತಲುಪಲಿದೆ. ಇವೆಲ್ಲವೂ ಭಯೋತ್ಪಾದನೆಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು 80 ಪುಟಗಳ ವರದಿಯಲ್ಲಿ ಕಟುವಾಗಿ ವಿವರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply