ವಿಧಾನಸೌಧದಲ್ಲಿ ಮತ್ತೆ ಕಾಣಿಸಿಕೊಂಡ ಗೂಬೆ! ಬಿಸಿಬಿಸಿ ಚರ್ಚೆ ಆರಂಭ

ಬೆಂಗಳೂರು: ಕಾಗೆ, ಗೂಬೆ, ಹಾವು ಆಯ್ತು ಇದೀಗ ಮತ್ತೆ ವಿಧಾನಸೌಧದಲ್ಲಿ ಗೂಬೆ ಕಾಣಿಸಿಕೊಂಡಿದೆ. ಮೂರನೇ ಮಹಡಿಯಲ್ಲಿರುವ ಕ್ಯಾಬಿನೆಟ್ ಹಾಲ್ ಎದುರುಗಿರುವ ಸಿಎಂ ಕೊಠಡಿಯ ಬಾಗಿಲಲ್ಲಿ ಕೆಲಕಾಲ ಗೂಬೆ ಕುಳಿತಿದ್ದು ವಿಧಾನಸೌಧ ಸಿಬ್ಬಂದಿ ನಡುವೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ ಮೇಲೆ ಕಾಗೆ ಮರಿ ಕುಳಿಕುಕೊಂಡಿತ್ತು. ಕಾಕತಾಳೀಯ ಎಂಬಂತೆ ಕಾಗೆ ಮರಿ ಕುಳಿತ ಕೆಲ ದಿನಗಳ ಬಳಿಕ ಕಾರು ಬದಲಾಗಿತ್ತು.

ಈ ಘಟನೆಯ ನಂತರ ಕೇರಳದ ಮಂಜೇಶ್ವರದಲ್ಲಿರುವ ನಡೆದ ಕಾರ್ಯಕ್ರಮದಲ್ಲಿ ಸಿಎಂ ಅವರ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಈ ಮಧ್ಯೆ ಗೂಬೆಯೂ ವಿಧಾನಸೌಧಕ್ಕೆ ಬಂದಿತ್ತು ತದನಂತರ ಇತ್ತೀಚೆಗೆ ವಿಧಾನ ಸೌಧ ಆವರಣದಲ್ಲಿ ನಾಗರ ಹಾವು ಕೂಡ ಬುಸುಗುಟ್ಟಿತ್ತು. ಇದೀಗ ಮತ್ತೆ ಗೂಬೆ ವಿಧಾನಸೌಧ ಆವರಣದೊಳಗೆ ಪ್ರವೇಶಿಸಿದೆ.

ಇದನ್ನೂ ಓದಿ:ಕಾಗೆ ಹಿಕ್ಕೆ ಹಾಕಿದ ವಿಷಯದ ಬಗ್ಗೆ ಸಿಎಂ ಹೀಗಂದ್ರು!

ಇತ್ತೀಚೆಗಷ್ಟೇ ಇಂಧನ ಸಚಿವ ಡಿಕೆ ಶಿವಕುವಾರ್ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಸಿಎಂ ಸಂಪುಟಕ್ಕೆ ಸಚಿವ ಸ್ಥಾನ ತುಂಬಲು ತಯಾರಿ ನಡೆಯುತ್ತಿದೆ. ಇವುಗಳ ಮಧ್ಯೆ ಇದೀಗ ಗೂಬೆ ಪ್ರವೇಶಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಶುಭವೋ ಅಥವಾ ಅಶುಭವೋ ಎನ್ನುವ ಬಗ್ಗೆ ವಿಧಾನಸೌಧದ ಸಿಬ್ಬಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಾಗೆ, ಗೂಬೆ ಆಯ್ತು, ಈಗ ಹಾವು: ವಿಧಾನಸೌಧದಲ್ಲಿ ಬುಸ್ ಎಂದ ನಾಗರಹಾವು

https://www.youtube.com/watch?v=hbmbFBDlBsQ

https://www.youtube.com/watch?v=7kkETPn6ThA

Comments

Leave a Reply

Your email address will not be published. Required fields are marked *