ಪೈಲಟ್ ಜಾಗದಲ್ಲಿ ಕುಳಿತ ಗೂಬೆ

ಮುಂಬೈ: ನಗರದ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ ವೇಸ್ ಬೋಯಿಂಗ್ 777 ವಿಮಾನದ ಪೈಲಟ್ ಗಳು ಕುಳಿತುಕೊಳ್ಳುವ ಜಾಗದಲ್ಲಿ ಗೂಬೆ ನೋಡಿ ವಿಮಾನ ಎಂಜಿನಿಯರ್ಸ್ ಆಶ್ಚರ್ಯಗೊಂಡಿದ್ದಾರೆ.

ವಿಮಾನದ ಕಿಟಕಿ ಪಕ್ಕದಲ್ಲಿರುವ ಕಮಾಂಡರ್ ಸೀಟಿನಲ್ಲಿ ಗೂಬೆ ಕುಳಿತಿತ್ತು. ಅದರ ಮುಖ ಹೃದಯಾಕಾರದಲ್ಲಿ ಇರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ವಿಮಾನದಲ್ಲಿ ಗೂಬೆಯನ್ನು ನೋಡಿದ ಅಧಿಕಾರಿಗಳು ಅದನ್ನು ಹಿಡಿದು ಬಳಿಕ ಮುಂಬೈ ವಿಮಾನ ನಿಲ್ದಾಣದ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಸಿಬ್ಬಂದಿ ವಿಮಾನದಿಂದ ಹೊರಕ್ಕೆ ಬರುತ್ತಿದ್ದಾಗಲೂ ಏನು ಗದ್ದಲವನ್ನು ಉಂಟುಮಾಡದೇ ಗೂಬೆ ಸುಮ್ಮನೆ ಕುಳಿತಿತ್ತು. ಈ ವೇಳೆ ಸಿಬ್ಬಂದಿ ಅದರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಭಾನುವಾರ ರಾತ್ರಿ ವಿಮಾನವನ್ನು ನಿಲ್ಲಿಸಿದಾಗ, ಬಾಗಿಲು ತೆರೆದಿದ್ದರಿಂದ ಗೂಬೆ ಒಳಗೆ ಆಹಾರ ಹುಡುಕುತ್ತಾ ಬಂದಿದೆ. ಸೋಮವಾರ ಹಾರಾಟಕ್ಕೆ ವಿಮಾನ ಸಿದ್ಧಗೊಳಿಸಲು ಒಳಬಂದ ಸಿಬ್ಬಂದಿಗೆ ಗೂಬೆ ಕಾಣಿಸಿದೆ.

ಈ ಮಧ್ಯಮ ಗಾತ್ರದ ಗೂಬೆಗಳು ಸುದೀರ್ಘವಾದ, ದುಂಡಾದ ರೆಕ್ಕೆಗಳು ಮತ್ತು ಸಣ್ಣ ಬಾಲಗಳನ್ನು ಹೊಂದಿರುತ್ತವೆ. ಅವುಗಳು ಸರಾಗವಾಗಿ ವಿಮಾನದ ಶೈಲಿಯಲ್ಲಿ ಹಾರಾಟ ಮಾಡುತ್ತವೆ. ಇವುಗಳಿಗೆ ಕಿವಿ ಇಲ್ಲದ ಕಾರಣ ತಲೆ ದುಂಡಾಗಿರುತ್ತದೆ. ಮುಂಬೈ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶ ಜೋಪಡಿಗಳಿಂದ ಕೂಡಿದ್ದು, ಅರಣ್ಯ ಪ್ರದೇಶವನ್ನು ಹೊಂದಿದೆ. ಈ ಪ್ರದೇಶದಿಂದ ಈ ಗೂಬೆ ಆಹಾರ ಅರಸುತ್ತಾ ವಿಮಾನ ನಿಲ್ದಾಣಕ್ಕೆ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *