USನಲ್ಲಿ ಒಂದೇ ವಾರದಲ್ಲಿ 33 ಸಾವಿರ ಮಕ್ಕಳಿಗೆ ಕೊರೊನಾ ಸೋಂಕು

CHILDRENS COVID

ನವದೆಹಲಿ: ಚೀನಾದಲ್ಲಿ ಈಗಾಗಲೇ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿದೆ. ಈ ಬೆನ್ನಲ್ಲೇ ಅಮೆರಿಕದಲ್ಲೂ ಕೊರೊನಾ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ 33 ಸಾವಿರ ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತ ಮಕ್ಕಳ ಸಂಖ್ಯೆ 1.29 ಕೋಟಿಗೆ ತಲುಪಿರುವ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ.

baby covid-19

ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (AAP) ಹಾಗೂ ಮಕ್ಕಳ ಆಸ್ಪತ್ರೆಗಳ ಸಂಘದ ವರದಿಯ ಪ್ರಕಾರ, ಈವರೆಗೆ ಯುಎಸ್‌ನಲ್ಲಿ ಮಕ್ಕಳ ಒಟ್ಟು ಸೋಂಕಿತರ ಸಂಖ್ಯೆ 12.9 ಮಿಲಿಯನ್‌ಗೆ ತಲುಪಿದೆ. ಕಳೆದ ಸೆಪ್ಟೆಂಬರ್ ಮೊದಲ ವಾರದಿಂದ ದೇಶದಲ್ಲಿ ಸುಮಾರು 79 ಲಕ್ಷ ಮಕ್ಕಳು ಸೋಂಕಿಗೆ ತುತ್ತಾಗಿದ್ದರು. ಆದರೆ ಕಳೆದ 4 ವಾರಗಳಲ್ಲಿ ಸುಮಾರು 1,16,000 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ವಿಕಿರಣ ವಿರೋಧಿ ಔಷಧಿ ಸಂಗ್ರಹಿಸಿ – ಉಕ್ರೇನಿಯನ್ನರಿಗೆ ಝೆಲೆನ್ಸ್ಕಿ ಕರೆ

covid

ಯುಸ್‌ನಲ್ಲಿನ ಒಟ್ಟ ಕೋವಿಡ್ ಪ್ರಕಣಗಳಲ್ಲಿ ಶೇ.19 ಪ್ರತಿಶತದಷ್ಟು ಮಕ್ಕಳೇ ಇದ್ದಾರೆ. ಕಳೆದವಾರ 33,000ಕ್ಕೂ ಹೆಚ್ಚು ಮಕ್ಕಳ ಕೋವಿಡ್ ಪ್ರಕರಣಗಳು ವರದಿಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರರಾಗಿ ಭಾರತೀಯ ಮೂಲದ ಶಾಂತಿ ಸೇಠಿ ನೇಮಕ

ಹೊಸ ಕೋವಿಡ್ ರೂಪಾಂತರಗಳಿಗೆ ಸಂಬಂಧಿಸಿದಂತೆ ಅನಾರೋಗ್ಯದ ತೀವ್ರತೆ, ಸಂಭಾವ್ಯ ದೀರ್ಘಾವಧಿಯ ಪರಿಣಾಮಗಳನ್ನು ನಿರ್ಣಯಿಸಲು ನಿರ್ದಿಷ್ಟ ದತ್ತಾಂಶ ಸಂಗ್ರಹಿಸಬೇಕು. ಜೊತೆಗೆ ಮಕ್ಕಳ ಆರೋಗ್ಯದ ಮೇಲೆ ಸಾಂಕ್ರಾಮಿಕದ ತಕ್ಷಣದ ಪರಿಣಾಮಗಳನ್ನು ಗುರುತಿಸುವುದು ಮುಖ್ಯ. ಅದಕ್ಕಾಗಿ ಈಗಿನಿಂದಲೇ ನಾವು ಮಕ್ಕಳು ಹಾಗೂ ಯುವಸಮೂಹದ ಮೇಲೆ ಉಂಟಾಗುವ ದೀರ್ಘಕಾಲದ ಪರಿಣಾಮಗಳನ್ನು ಗುರುತಿಸಿ ಪರಿಹರಿಸಲು ಸಿದ್ಧರಾಗಬೇಕು ಎಂದು AAP ಹೇಳಿದೆ.

Comments

Leave a Reply

Your email address will not be published. Required fields are marked *