ದಕ್ಷಿಣದ ಸಿನಿಮಾಗಳಿಗೆ ಭೇಷ್ ಎಂದ ನಿರ್ದೇಶಕ ಕರಣ್ ಜೋಹರ್

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಕ್ಷಿಣದ ಸಿನಿಮಾಗಳು ಸಕ್ಸಸ್ ಕಾಣುತ್ತಿದೆ. ಕೆಲ ಬಾಲಿವುಡ್ ಸ್ಟಾರ್ಸ್ ಅಸಮಾಧಾನ ಹೊರಹಾಕಿದ್ದರೆ, ಇನ್ನು ಕೆಲವರು ಸೌತ್ ಚಿತ್ರಗಳನ್ನ ನೋಡಿ ಮೆಚ್ಚಿಕೊಂಡಿದ್ದರು. ಈಗ ನಿರ್ದೇಶಕ ಕರಣ್ ಜೋಹರ್ ದಕ್ಷಿಣದ ಸಿನಿಮಾಗಳನ್ನು ಹಾಡಿ ಹೊಗಳಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸೌತ್ ಚಿತ್ರಗಳ ಗೆಲುವಿಗೆ ಕೆಲ ಬಾಲಿವುಡ್ ಮಂದಿ ಅಸಮಾಧಾನ ಹೊರ ಹಾಕಿದರೆ, ಇನ್ನು ಕೆಲವರು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ಸೌತ್ ಸಿನಿಮಾಗಳನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಕಥೆ, ಸಿನಿಮಾ ಕ್ವ್ಯಾಲಿಟಿ ಬಗ್ಗೆ ಭೇಷ್ ಎಂದಿದ್ದಾರೆ.

ಕೆಜಿಎಫ್ 2, ಪುಷ್ಪ, ಆರ್‌ಆರ್‌ಆರ್ ಚಿತ್ರಗಳು ಗೆಲ್ಲಲು ನಿರ್ದೇಶಕರ ಪಾತ್ರ ದೊಡ್ಡದಿದೆ. ಈ ಸಿನಿಮಾಗಳು ಭಾರತೀಯ ಸಿನಿಮಾಗಳೇ ಆಗಿರುವುದರಿಂದ ನಮಗೆ ಹೆಮ್ಮೆ ಎನಿಸುತ್ತದೆ. ನಮ್ಮ ಭಾರತೀಯ ಚಿತ್ರರಂಗದಲ್ಲಿ ಪ್ರಶಾಂತ್‌ನೀಲ್,ಸುಕುಮಾರ್, ರಾಜಮೌಳಿ ಅಂತಹ ಟ್ಯಾಲೆಂಟೆಡ್ ನಿರ್ದೇಶಕರು ನಮ್ಮಲ್ಲಿದ್ದಾರೆ ಎನ್ನುವುದೇ ಖುಷಿ ಎಂದಿದ್ದಾರೆ. ಇನ್ನು ಹಿಂದಿಯ `ಭೂಲ್ ಭುಲಯ್ಯಾ 2′ ಚಿತ್ರ ಇದೀಗ ತೆರೆಕಂಡಿದ್ದು, ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಅಖಾಡಕ್ಕೆ ರಾಕ್ ಲೈನ್ ವೆಂಕಟೇಶ್ : ಉಲ್ಟಾ ಆದ ಲೆಕ್ಕಾಚಾರ

ಯಾವ ಭಾಷೆಯಲ್ಲಿ ಸಿನಿಮಾ ನಿರ್ಮಾಣವಾದ್ದರೂ, ಅದು ಭಾರತೀಯ ಚಿತ್ರದ ಭಾಗವೇ ಆಗಿದೆ ಎಂದು ಅಕ್ಷಯ್ ಕುಮಾರ್ ಹೇಳಿಕೆಯನ್ನು ಕರಣ್ ಜೋಹರ್ ಸಮರ್ಥಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *