ನವದೆಹಲಿ: ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆಗೆ ನನಗೂ ನೂರಕ್ಕೆ ನೂರು ಅವಕಾಶ ಸಿಗುವ ನಂಬಿಕೆ ಇದೆ. ನಮ್ಮ ತ್ಯಾಗಕ್ಕೆ ನ್ಯಾಯ, ಬೆಲೆ ಸಿಗಲಿದೆ ಎಂದು ಮಾಜಿ ಸಚಿವ, ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದರು.

ನವದೆಹಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ನಂಬಿಕೆ ಮೇಲೆ ನಾವು ಬಿಜೆಪಿಗೆ ಬೆಂಬಲ ನೀಡಿದ್ದೆವು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ರೆ ಅಭಿವೃದ್ಧಿ ಹೆಚ್ಚುವ ವಿಶ್ವಾಸದಲ್ಲಿ ನಾನೂ ಸೇರಿ 17 ಮಂದಿ ಶಾಸಕರು ಬೆಂಬಲ ನೀಡಿದ್ದೆವು ಎಂದು ವಿವರಿಸಿದರು. ಇದನ್ನೂ ಓದಿ: ಗ್ಯಾರೇಜ್‌ನಲ್ಲಿ ಧಗ ಧಗ ಹೊತ್ತಿ ಉರಿದ ಬೆಂಕಿ – ಮೂರು ಲಾರಿಗಳು ಸುಟ್ಟು ಭಸ್ಮ

ಅನರ್ಹವಾದ ಬಳಿಕ ನನ್ನ ಪರಿಷತ್ತ್‌ಗೆ ಆಯ್ಕೆ ಮಾಡಿ ಕೆಲ ದಿನಗಳ ಕಾಲ ಮಾತ್ರ ಮಂತ್ರಿ ಮಾಡಲಾಗಿತ್ತು. ರಾಜೀನಾಮೆ ಪಡೆಯುವ ವೇಳೆ ಮತ್ತೆ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದರು. ಈ ಹಿನ್ನೆಲೆ ಈ ಬಾರಿ ನನಗೂ ಅವಕಾಶ ನೀಡಬೇಕಿದೆ ಎಂದು ತಿಳಿಸಿದರು.

ನನ್ನ ಕ್ಷೇತ್ರದ ಜನರ ನಿರೀಕ್ಷೆ ಹೆಚ್ಚಿದೆ. ನಾನು ಇನ್ನು ಹೆಚ್ಚಿನ ಕೆಲಸ ಮಾಡಬೇಕಿದೆ. ಈ ಬಗ್ಗೆ ನಾನು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಚರ್ಚೆ ಮಾಡಿದ್ದೇನೆ. ಹಿಂದೆ ಹೈಕಮಾಂಡ್ ನಾಯಕರು ಮತ್ತು ಸಂಘದವರ ಬಳಿಯೂ ಚರ್ಚಿಸಿದ್ದೇನೆ. ಹೀಗಾಗಿ ಈ ಬಾರಿ ನನಗೆ ಅವಕಾಶ ಸಿಗಬಹುದು ಎಂದು ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಖಾದಿ ತೊರೆದು ಕಾವಿ ತೊಡಲಿರುವ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ

Leave a Reply