ಕರ್ನಾಟಕದಲ್ಲೂ ನಮ್ಮ ಪಕ್ಷ ಸುಭದ್ರವಾಗಿದೆ, ಸಂಘಟನೆಯಲ್ಲೂ ಗಟ್ಟಿಯಾಗಿದೆ: ಬಿ.ವೈ.ವಿಜಯೇಂದ್ರ

ಬೆಳಗಾವಿ: ಕರ್ನಾಟಕದಲ್ಲೂ ನಮ್ಮ ಪಕ್ಷ ಸುಭದ್ರವಾಗಿದೆ. ಸಂಘಟನೆಯಲ್ಲೂ ಗಟ್ಟಿಯಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಬಿಜೆಪಿಯಲ್ಲಿ ಸವದಿ, ಕತ್ತಿ ವರ್ಸಸ್ ಜಾರಕಿಹೊಳಿ ಬ್ರದರ್ಸ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮದು ದೊಡ್ಡ ರಾಷ್ಟ್ರೀಯ ಪಕ್ಷ ಬಿಜೆಪಿ. ಕರ್ನಾಟಕದಲ್ಲೂ ನಮ್ಮ ಪಕ್ಷ ಸುಭದ್ರವಾಗಿದೆ, ಸಂಘಟನೆಯಲ್ಲೂ ಗಟ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತೆ. ಇದನ್ನೆಲ್ಲಾ ಸರಿದೂಗಿಸುವ ಕೆಲಸ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮಾಡ್ತಾರೆ. ಪಕ್ಷದ ಹಿರಿಯ ಮುಖಂಡರಿದ್ದು, ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತಾರಾಜ್ಯ ಜಲ ವಿವಾದ ಕುರಿತು ಕಾನೂನು ತಜ್ಞರೊಂದಿಗೆ ಬೊಮ್ಮಾಯಿ ಸಭೆ

ಸಂಪುಟ ಪುನರ್‍ರಚನೆ, ನಿಗಮಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಆದ ಸಂದರ್ಭದಲ್ಲಿ ನಿಗಮ ಮಂಡಳಿಗಳಿಗೆ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದಾರೆ. ಬೇರೆ ಕಾರ್ಯಕರ್ತರಿಗೂ ಅವಕಾಶ ಕೊಡಬೇಕೆಂಬ ಸದುದ್ದೇಶ ಸಿಎಂ, ರಾಜ್ಯಾಧ್ಯಕ್ಷರು ಇಟ್ಟುಕೊಂಡಿದ್ದಾರೆ. ಸದ್ಯದಲ್ಲೇ ಅದು ಆಗುತ್ತೆ ಎಂಬ ಭರವಸೆ ನಮ್ಮೆಲ್ಲರಲ್ಲೂ ಇದೆ ಎಂದು ಹೇಳಿದರು.

ಬೆಳಗಾವಿ ಮೇಯರ್ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಲು ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಕುರಿತು ಜಿಲ್ಲೆಯ ಮುಖಂಡರು, ಸಚಿವರು ಕುಳಿತು ತೀರ್ಮಾನ ಮಾಡ್ತಾರೆ ಎಂದರು. ವಿಜಯೇಂದ್ರ ಸಂಪುಟ ಸೇರುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಉಪಾಧ್ಯಕ್ಷನಾಗಿ ಸಂಘಟನೆ ಕೆಲಸ ಮಾಡ್ತಿದೀನಿ. ಈ ಬಗ್ಗೆ ಪಕ್ಷ, ಸಿಎಂ, ರಾಜ್ಯಾಧ್ಯಕ್ಷರು ಕುಳಿತು ತೀರ್ಮಾನ ಮಾಡ್ತಾರೆ. ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ ಎಂದರು. ಇದನ್ನೂ ಓದಿ: ಮಾರಿ ಕಣ್ಣು ಹೋರಿ ಮ್ಯಾಲೆ, ಸಿದ್ದರಾಮಯ್ಯ ಕಣ್ಣು ಅಲ್ಪಸಂಖ್ಯಾತರ ಮೇಲೆ: ಆರ್.ಅಶೋಕ್

Comments

Leave a Reply

Your email address will not be published. Required fields are marked *