ಸಮಾಜಕ್ಕೆ ಏನಾದ್ರೂ ಕೊಡ್ಬೇಕೆಂಬ ಭಾವನೆಯಿಂದ ಕುಟುಂಬ ರಾಜಕೀಯಕ್ಕೆ ಬಂದಿದೆ: ರೇವಣ್ಣ

ನವದೆಹಲಿ: ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಭಾವನೆಯಿಂದ ನಮ್ಮ ಕುಟುಂಬ ರಾಜಕೀಯಕ್ಕೆ ಬಂದಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಕುಟುಂಬ ರಾಜಕೀಯದ ಬಗ್ಗೆ ಸಮರ್ಥನೆ ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಮಂಡ್ಯದಲ್ಲಿ ಶಿವರಾಮೇಗೌಡ ಬದಲು ನಿಖಿಲ್‍ರನ್ನು ನಿಲ್ಲಿಸೋಣ ಎಂದುಕೊಂಡಿದ್ದೆವು. ಬಳಿಕ ನಾವು ಶಿವರಾಮೇಗೌಡ ಅವರನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಪೇಪರ್ ಕಟ್ಟಿಂಗ್ಸ್‍ಗಳಲ್ಲಿ ‘ಗೋ ಬ್ಯಾಕ್ ನಿಖಿಲ್ ಕುಮಾರಸ್ವಾಮಿ’ ಎಂದು ಅಭಿಯಾನದ ಹಿಂದೆ ಯಾರೂ ಇದ್ದಾರೆ ಎಂಬುದು ಕಾಲ ಬಂದಾಗ ಹೇಳುತ್ತೇನೆ ಅಂದ್ರು.

ಮಂಡ್ಯದಲ್ಲಿ ಚಾಲೆಂಜ್ ಪ್ರಶ್ನೆ ಇಲ್ಲ. ಏಕೆಂದರೆ ಮಂಡ್ಯದ 7 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಇದೆ. 7 ಪಕ್ಷ ಜೆಡಿಎಸ್ ಇರುವಾಗ ನಮ್ಮ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಅವರು ನಿರ್ಧರಿಸುತ್ತಾರೆ. ನಿಖಿಲ್ ಸಿಎಂ ಮಗ. ಹಾಗಾಂತ ಅವರು ಚುನಾವಣೆಯಿಂದ ಹಿಂದೆ ಸರಿಯುವುದಕ್ಕೆ ಆಗುತ್ತಾ ಎಂದು ಹೇಳಿದ್ದಾರೆ.

ಪ್ರಜ್ವಲ್ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ಹಾಗಂತ ಅವರು ಚುನಾವಣೆಗೆ ನಿಲ್ಲಬಾರದು ಎಂದೇನಿಲ್ಲ. ಜನಗಳೇ ಹೇಳಿದ್ದರೂ ಪ್ರಜ್ವಲ್‍ನನ್ನು ಬೇಲೂರು, ಹುಣಸೂರುರಲ್ಲಿ ಎಂಎಲ್‍ಎ ಅಭ್ಯರ್ಥಿಯಾಗಿ ನಿಲ್ಲಿ ಎಂದು ಹೇಳಿದ್ದರು. ಆಗ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಇಬ್ಬರೇ ಎಂಎಲ್‍ಎ ಗೆಲ್ಲಬೇಕು ಎಂದು ಹೇಳಿದ್ದರು. ಈಗ ಸ್ವತಃ ದೇವೇಗೌಡ ಅವರೇ ಪ್ರಜ್ವಲ್‍ನನ್ನು ಹಾಸನ ಕ್ಷೇತ್ರದಲ್ಲಿ ನಿಲ್ಲಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದರು.

ನನ್ನ ಪತ್ನಿಯನ್ನು ಬೇಲೂರಲ್ಲಿ ಚುನಾವಣೆಗೆ ನಿಲ್ಲಿಸಬೇಕಿತ್ತು. ಅಲ್ಲಿ 7 ಜನ ಎಂಎಲ್‍ಎಗಳಿದ್ದರು. ಹಾಗಾಗಿ ನಾವು ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಭಾವನೆಯಿಂದ ಲಿಂಗೇಶ್ವರಕ್ಕೆ ಕೊಟ್ಟಿದ್ದೇವೆ. ಹಾಗಂತ ನಾವು ಫ್ಯಾಮಿಲಿ ರಾಜಕೀಯ ಮಾಡುತ್ತಿದ್ದೇವೆ ಎಂದು ಹೇಳುವುದು ಬೇಡ. ನಾನು, ನನ್ನ ಪತ್ನಿ ಎಲ್ಲರೂ ದೇವೇಗೌಡರು ಹಾಸನದಿಂದ ನಿಲ್ಲಬೇಕು ಎಂದುಕೊಂಡಿದ್ದೆವು. ಆದರೆ ದೇವೇಗೌಡರು ಅವರು ಪ್ರಜ್ವಲ್ ಅವರನ್ನು ನಿಲ್ಲಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.

ರಾಜ್ಯದಲ್ಲಿ, ರಾಷ್ಟ್ರದಲ್ಲಿ ದೇವೇಗೌಡ ಅವರ ಅಪ್ಪ- ಮಕ್ಕಳು ಪಕ್ಷ ಮಾತ್ರ ಇದೆಯಾ, ಬೇರೆ ಕಡೆ ಅಪ್ಪ- ಮಕ್ಕಳು ಪಕ್ಷ ಇಲ್ಲವಾ. ನಮ್ಮ ಪಕ್ಷದಲ್ಲಿ ಅಪ್ಪ-ಮಕ್ಕಳು ಹಾಗೂ ಮೊಮ್ಮಕ್ಕಳು ಬಂದರೆ ಏನ್ ಕಷ್ಟ. ನಮ್ಮ ತಂದೆ ರಾಷ್ಟ್ರೀಯ ನಾಯಕರು, ಅವರ ಮಗ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ. ಹಾಗಾಗಿ ಪಕ್ಷ ಏನೂ ಹೇಳುತ್ತೋ ಅದಕ್ಕೆ ನಾವು ಬದ್ಧ. ದೇವೇಗೌಡರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಪಕ್ಷ ನಿರ್ಧರಿಸುತ್ತೆ ಎಂದರು.

ಯಡಿಯೂರಪ್ಪ ಅವರ ಮಗ ಕೂಡ ಚುನಾವಣೆಯಲ್ಲಿ ನಿಂತಿದ್ದಾರೆ. ಬಂಗಾರಪ್ಪ ಅವರ ಕುಟುಂಬದವರು ಕೂಡ ಚುನಾವಣೆಯಲ್ಲಿ ನಿಂತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಜೊತೆ ಕೂತು ಕುಮಾರಸ್ವಾಮಿ ಅವರು ಈ ಬಗ್ಗೆ ಮಾತನಾಡಿದ್ದರು. ಆಗ ಪಕ್ಷದ ಎಲ್ಲ ಕಾರ್ಯಕರ್ತರು ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದಾರೆ. ಹಾಗಾಗಿ ನಿಖಿಲ್ ಅವರು ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದಾರೆ ಅಂದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *