ಸಾರ್ವಜನಿಕ-ಖಾಸಗಿ ಭದ್ರತಾ ಸಹಕಾರಕ್ಕೆ ಉತ್ತೇಜನ – OSAC ಇಂಡಿಯಾದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟನೆ

ಚೆನ್ನೈ: ಅಮೆರಿಕ ಸರ್ಕಾರ (USA Govermnt) ಮತ್ತು ಖಾಸಗಿ ವಲಯದ ಭದ್ರತಾ ತಜ್ಞರ ನಡುವಿನ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಆಯೋಜಿಸಿದ್ದ ಒಸಾಕ್‌ (OSAC) ಇಂಡಿಯಾ ವಾರ್ಷಿಕ ಸಾಮಾನ್ಯ ಸಭೆಯನ್ನು ಯು.ಎಸ್‌. ಕಾನ್ಸುಲ್‌ ಜನರಲ್‌ ಕ್ರಿಸ್‌ ಹಾಡ್ಜಸ್‌ ಮತ್ತು ತಮಿಳುನಾಡು ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಸಚಿವ ಡಾ. ಪಳನಿವೇಲ್ ತ್ಯಾಗರಾಜನ್‌ ಅವರು ಚೆನ್ನೈಯಲ್ಲಿ ಉದ್ಘಾಟಿಸಿದರು.

ಒಸಾಕ್‌ (ಒಎಸ್‌ಎಸಿ), ಅಮೇರಿಕದ ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ನ ಡಿಪ್ಲೊಮ್ಯಾಟಿಕ್‌ ಸೆಕ್ಯುರಿಟಿ ಸರ್ವೀಸ್‌ (ಡಿಎಸ್‌ಎಸ್‌) ಮತ್ತು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕನ್‌ ಸಂಸ್ಥೆಗಳ ಭದ್ರತಾ ತಜ್ಞರ ಸಾರ್ವಜನಿಕ -ಖಾಸಗಿ ಸಹಭಾಗಿತ್ವವಾಗಿದೆ. ವಿದೇಶಗಳಲ್ಲಿ ಅಮೆರಿಕನ್‌ ಹಿತಾಸಕ್ತಿ ರಕ್ಷಿಸಲು ಸಕಾಲದಲ್ಲಿ ಭದ್ರತಾ ಮಾಹಿತಿಯ ವಿನಿಮಯ ಮತ್ತು ನಿಕಟ ಸಂಬಂಧವನ್ನು ಒಸಾಕ್‌ ಸದಸ್ಯರು ಹೊಂದಿರುತ್ತಾರೆ.

ಚೆನ್ನೈನಲ್ಲಿನ ಅಮೇರಿಕ ದೂತಾವಾಸ ಹಾಗೂ ಭಾರತದಾದ್ಯಂತ ಇರುವ ಡಿಪ್ಲೊಮ್ಯಾಟಿಕ್‌ ಮತ್ತು ಕಾರ್ಪೊರೇಟ್‌ ವಲಯದ ಭದ್ರತಾ ತಜ್ಞರು, ಅಮೇರಿಕ ಮತ್ತು ಭಾರತೀಯ ಖಾಸಗಿ ವಲಯದ ಪಾಲುದಾರರೊಂದಿಗೆ ತರಬೇತಿ, ಸಮಾಲೋಚನೆ, ಕಾರ್ಯಕ್ರಮಗಳು, ಭದ್ರತಾ ಎಚ್ಚರಿಕೆಗಳು, ಮತ್ತು ಭದ್ರತಾ ವಿಷಯದ ಬಗೆಗಿನ ವಿಶ್ಲೇಷಣೆ ಮಾಡಲು ಈ ಸಮಾವೇಶವನ್ನು ಬಳಸಿಕೊಂಡರು. ಇದನ್ನೂ ಓದಿ: ಭಾರತದ ಜೊತೆ ಚೇಷ್ಟೆ – ಶೀಘ್ರವೇ ಜಸ್ಟಿನ್‌ ಟ್ರುಡೋ ರಾಜೀನಾಮೆ?

ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಡಿಪ್ಲೊಮ್ಯಾಟಿಕ್‌ ಸೆಕ್ಯುರಿಟಿ ರೀಜನ್‌ ಸೆಕ್ಯುರಿಟಿ ಆಫೀಸರ್‌ ಸ್ಕಾಟ್‌ ಸ್ಕೌನರ್‌, “ಭದ್ರತಾ ತಜ್ಞರು ಮತ್ತು ಪಾಲುದಾರರಾಗಿ ನಾವು ಭಾರತೀಯ ಖಾಸಗಿ ವಲಯದ ಸಹಭಾಗಿಗಳೊಂದಿಗೆ ಜತೆಗೂಡಿ ಲಿಂಗ ಸಮಾನತೆಯ ಮಾದರಿ, ಅಪಾಯಗಳನ್ನು ಗುರುತಿಸುವುದು ಹಾಗೂ ಅವುಗಳ ಮೇಲೆ ಸತತ ನಿಗಾ ಇಡುವುದೂ ಸೇರಿದಂತೆ ಸಂಭವನೀಯ ಭದ್ರತಾ ಸಮಸ್ಯೆಗಳನ್ನು ನಿರೀಕ್ಷಿಸುವ ಸಾಮರ್ಥ್ಯವನ್ನು ಉತ್ತಮ ಪಡಿಸಿ ವಿಶ್ವಾಸಾರ್ಹತೆ ಹೆಚ್ಚಿಸುವ ಉದ್ದೇಶ ನಮ್ಮದು ಎಂದರು.

ತಮಿಳುನಾಡು ಐಟಿ ಸಚಿವ ಡಾ. ಪಳನಿವೇಲ್‌ ತ್ಯಾಗರಾಜನ್‌ ಈ ಐತಿಹಾಸಿಕ ಸಭೆ ಚೆನ್ನೈನಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ವೈವಿಧ್ಯ, ನೇರ‍್ಮೆ, ಒಳಗೊಳ್ಳುವಿಕೆ ಮತ್ತು ಲಭ್ಯತೆ (DEIA) ತಮಿಳುನಾಡಿನ ಡಿಎನ್ ಎ ದಲ್ಲಿದೆ. OSAC ಕೂಡ ಇದನ್ನೇ ಅನುಸರಿಸುತ್ತಿರುವುದನ್ನು ನೋಡಲು ಸಂತಸವಾಗುತಿದೆ. ಇಂದಿನ ಕಾರ್ಯಕ್ರಮದ ಗಾತ್ರವು, ವಾಣಿಜ್ಯ ಹಾಗೂ ವ್ಯೂಹಾತ್ಮಕವಾಗಿರುವ ಅಮೇರಿಕ-ಭಾರತದ ಸಂಬಂಧದ ಪ್ರತಿಬಿಂಬವಾಗಿದೆ. ಉದ್ದೇಶಪೂರ್ವಕ ಬೆದರಿಕೆಗಳ ಈ ಯುಗದಲ್ಲಿ, ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಳ್ಳಲು ಪ್ರತಿದಿನ ಕಲಿಯುತ್ತಿರಬೇಕು. OSAC ಖಾಸಗಿ-ಸಾರ್ವಜನಿಕ ಪಾಲುದಾರಿಕೆಯ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು.

ದೆಹಲಿಯಲ್ಲಿರುವ ಅಮೇರಿಕ ರಾಯಭಾರ ಕಚೇರಿ ಡಿಪ್ಲೊಮ್ಯಾಟಿಕ್‌ ಸೆಕ್ಯುರಿಟಿ ಸೀನಿಯರ್‌ ರೀಜನಲ್‌ ಸೆಕ್ಯುರಿಟಿ ಆಫೀಸರ್‌ ಕ್ರಿಸ್ಟೊಫರ್‌ ಗಿಲ್ಸ್‌ ಅವರು, “ಅತ್ಯಂತ ಸುರಕ್ಷಿತ ಕಾರ್ಯಾಚರಣೆ ಪರಿಸರವನ್ನು ಖಾತ್ರಿಪಡಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದ್ದು, ಸಂಪರ್ಕದ ಮಹತ್ವವನ್ನು ಸಾರುತ್ತದೆ. ಅಮೆರಿಕ ಸರ್ಕಾರ ಮತ್ತು ಖಾಸಗಿ ವಲಯಗಳು ಈ ಸಮಾವೇಶವನ್ನು ಆಯೋಜಿಸಿವೆ,” ಎಂದರು.

ಒಸಾಕ್‌ ಬೆಂಗಳೂರು ಚಾಪ್ಟರ್‌: ಚೆನ್ನೈನಲ್ಲಿನ ಅಮೆರಿಕ ದೂತಾವಾಸದ ರೀಜನಲ್‌ ಸೆಕ್ಯುರಿಟಿ ಆಫೀಸರ್‌ ಸ್ಕೌನರ್‌ ಮತ್ತು ಸೆಕ್ಯುರಿಟಿ ಅಂಡ್‌ ರಿಸೆಲಿಯನ್ಸಿ ಆರ್ಗನೈಸೇಶನ್‌ನಲ್ಲಿ ರೀಜನಲ್‌ ಸೆಕ್ಯುರಿಟಿ ಲೀಡ್‌ ಆಗಿರುವ ಡೆಲ್‌ ಟೆಕ್ನಾಲಜೀಸ್‌ನ ಅನುಭವ್‌ ಮಿಶ್ರಾ ಅವರು ಒಸಾಕ್‌ ಬೆಂಗಳೂರು ಚಾಪ್ಟರ್‌ನ ಸಹ ಅಧ್ಯಕ್ಷರಾಗಿದ್ದಾರೆ. ಬೆಂಗಳೂರು ಚಾಪ್ಟರ್‌ ಭಾರತದಲ್ಲೇ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಚಾಪ್ಟರ್‌ ಇದಾಗಿದೆ.