ಮಣಿಪುರಕ್ಕೆ INDIA ಮೈತ್ರಿಕೂಟದ ನಿಯೋಗ ಭೇಟಿ

ನವದೆಹಲಿ: ಸುಮಾರು 3 ತಿಂಗಳಿಂದ ಹಿಂಸಾಚಾರ ಪೀಡಿತವಾಗಿರುವ ಮಣಿಪುರಕ್ಕೆ (Manipura) ಐಎನ್‌ಡಿಐಎ (INDIA) ಮೈತ್ರಿಕೂಟದ 21 ಜನರ ನಿಯೋಗ 2 ತಂಡಗಳಾಗಿ 2 ದಿನಗಳ ಭೇಟಿ ಕೈಗೊಂಡಿದೆ.

ಚುರಾಚಂದ್‍ಪುರ ಕುಕಿ ಜನಾಂಗದ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಜನರ ಜೊತೆ ಸಂವಾದ ನಡೆಸಿತು. ಬಳಿಕ ಮಾತನಾಡಿದ ನಿಯೋಗದ ಸದಸ್ಯರು,ಕೇಂದ್ರ ಸರ್ಕಾರ ಶೀಘ್ರವೇ ನಿಯೋಗ ರವಾನಿಸದೇ ಇರುವುದು ದುರಾದೃಷ್ಟ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ಈವರೆಗೆ ನಿದ್ದೆ ಮಾಡುತ್ತಿತ್ತಾ ಎಂದು ಪ್ರಶ್ನಿಸಿದರು.

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 2 ದಿನ ಮಣಿಪುರದಲ್ಲಿ ಪರಿಶೀಲನೆ ಮಾಡಲಿರುವ ವಿಪಕ್ಷಗಳ ನಿಯೋಗ ಲೋಕಸಭೆಯಲ್ಲಿ ವರದಿ ಮಂಡಿಸಿ ಸರ್ಕಾರದ ವಿರುದ್ಧ ಮುಗಿಬೀಳಲಿವೆ.  ಇದನ್ನೂ ಓದಿ: ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಹಸ್ತಕ್ಷೇಪ: ಮಾಜಿ ಸೇನಾ ಮುಖ್ಯಸ್ಥ

ಐಎನ್‌ಡಿಐಎ ನಿಯೋಗದ ಭೇಟಿ ತೋರಿಕೆ ಎಂದು ಬಿಜೆಪಿ ಟೀಕಿಸಿದೆ. ಮಣಿಪುರಕ್ಕೆ ಹೋಗುವ ನಿಮಗೆ ಪಶ್ಚಿಮ ಬಂಗಾಳಕ್ಕೆ ಹೋಗಲು ಸಮಯ ಇಲ್ಲವೇ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್‌ ವಾಗ್ದಾಳಿ ನಡೆಸಿದರು.


Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]