ಆಪರೇಷನ್ ಸಿಂಧೂರದ ಮೂಲಕ ನರಮೇಧಕ್ಕೆ ಉತ್ತರ: ಅಮಿತ್ ಶಾ ಶ್ಲಾಘನೆ

ನವದೆಹಲಿ: ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯಿದೆ ಎಂದು ಸೇನಾಪಡೆಗಳ ಕಾರ್ಯಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಎಕ್ಸ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ನಮ್ಮ ಮುಗ್ಧ ಸಹೋದರರ ಕ್ರೂರ ಹತ್ಯೆಗೆ ಆಪರೇಷನ್ ಸಿಂಧೂರದ(Operation Sindoor) ಮೂಲಕ ಭಾರತ ಉತ್ತರ ನೀಡಿದೆ. ಭಾರತ ಮತ್ತು ಅಲ್ಲಿನ ಜನರ ಮೇಲಿನ ಯಾವುದೇ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಮೋದಿ ಸರ್ಕಾರವು ನಿರ್ಧರಿಸಿದೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಲು ಭಾರತ ಸದಾ ಸಿದ್ಧ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: Operation Sindoor | ಶ್ರೀನಗರ ಏರ್‌ಪೋರ್ಟ್‌ ನಿಯಂತ್ರಣಕ್ಕೆ ಪಡೆದ IAF – ಜೆ&ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನ 2 ಗಂಟೆಗೆ ಗಡಿ ರಾಜ್ಯಗಳ ಮುಖ್ಯಮಂತ್ರಿಗಳು, ಡಿಜಿಪಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ಕರೆದಿದ್ದಾರೆ

ಪಹಲ್ಗಾಮ್ ಉಗ್ರರ ದಾಳಿಗೆ(Pahalgam Terror Attack) ಪತ್ರೀಕಾರವಾಗಿ ಇಂದು ತಡರಾತ್ರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಸೇನಾಯು ಪಾಕಿಸ್ತಾನದ ೯ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.