Operation Sindoor | ಪಾಕ್ ಉಗ್ರ ತಾಣಗಳ ಮೇಲೆ ಏರ್‌ಸ್ಟ್ರೈಕ್‌ – ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ

ನವದೆಹಲಿ: ಪಾಕಿಸ್ತಾನ (Pakistan) ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳ ಮೇಲೆ ನಡೆದ `ಆಪರೇಷನ್ ಸಿಂಧೂರ’ (Operation Sindoor) ವಾಯುದಾಳಿಯ ವಿಡಿಯೋವನ್ನು ಭಾರತೀಯ ಸೇನೆ ಹಂಚಿಕೊಂಡಿದೆ.

ಏ.22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ಉಗ್ರರ ದಾಳಿಯ ಪ್ರತೀಕಾರವಾಗಿ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಭಾರತೀಯ ಸೇನೆ ಮಂಗಳವಾರ ತಡರಾತ್ರಿ 1:44ರ ಸುಮಾರಿಗೆ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 70ಕ್ಕೂ ಅಧಿಕ ಭಯೋತ್ಪಾದಕರು ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.ಇದನ್ನೂ ಓದಿ: `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿದ ಪಾಕ್ – ತುರ್ತು ಪರಿಸ್ಥಿತಿ ಘೋಷಣೆ

ದಾಳಿಯ ಹಲವು ವಿಡಿಯೋಗಳನ್ನು ಸೇನೆ ಹಂಚಿಕೊಂಡಿದ್ದು, ವಾಯುದಾಳಿಗೆ ತತ್ತರಿಸಿದ ಪಾಕ್‌ನ ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಗುಂಪು ಸೇರಿ 9 ಉಗ್ರರ ನೆಲೆಗಳು ಧ್ವಂಸಗೊಂಡಿವೆ.

ವಿಡಿಯೋದಲ್ಲಿ ಏನಿದೆ?
ದಾಳಿ ಪ್ರಾರಂಭವಾದ ಮೊದಲು ಪಿಒಕೆಯ ಕೋಟ್ಲಿಯಲ್ಲಿರುವ ಮರ್ಕಜ್ ಅಬ್ಬಾಸ್ ಭಯೋತ್ಪಾದಕ ಕೇಂದ್ರದ ಧ್ವಂಸ, 25 ನಿಮಿಷಗಳ ದಾಳಿಯ ಮತ್ತೊಂದು ವಿಡಿಯೋದಲ್ಲಿ ನಿಯಂತ್ರಣ ರೇಖೆಯಿಂದ ಸುಮಾರು 30 ಕಿ.ಮೀಟರ್ ದೂರದಲ್ಲಿರುವ ಲಷ್ಕರ್-ಎ-ತೈಬಾ ನೆಲೆ ಕೋಟ್ಲಿಯಲ್ಲಿರುವ ಗುಲ್ಪುರ್ ಕೇಂದ್ರದ ನಾಶ, ಅಂತಾರಾಷ್ಟ್ರೀಯ ಗಡಿಯಿಂದ 6 ಕಿ.ಮೀ ದೂರದಲ್ಲಿರುವ ಸಿಯಾಲ್‌ಕೋಟ್‌ನಲ್ಲಿರುವ ಸರ್ಜಲ್ ಕೇಂದ್ರ, ಬಳಿಕ ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಬಹಾವಲ್ಪುರದಲ್ಲಿರುವ ಜೆಇಎಂ ಮತ್ತು ಮುರಿಡ್ಕೆಯಲ್ಲಿರುವ ಎಲ್‌ಇಟಿಯ ಪ್ರಧಾನ ಕಚೇರಿಗಳ ಮೇಲೆ ದಾಳಿ ನಡೆಸಿರುವುದನ್ನು ತೋರಿಸುತ್ತದೆ.

ನಂತರ ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 12 ರಿಂದ 18 ಕಿ.ಮೀ ದೂರದಲ್ಲಿರುವ ಸಿಯಾಲ್‌ಕೋಟ್‌ನಲ್ಲಿರುವ ಮಹಮೂನ ಜಯ ಕೇಂದ್ರ, ತಂಗ್ಧರ್ ಸೆಕ್ಟರ್‌ನ ಎಲ್‌ಒಸಿಯಿಂದ 30 ಕಿ.ಮೀ ದೂರದಲ್ಲಿರುವ ಮತ್ತು ಪ್ರಮುಖ ಎಲ್‌ಇಟಿ ತರಬೇತಿ ಕೇಂದ್ರವಾಗಿದ್ದ ಮುಜಫರಾಬಾದ್‌ನಲ್ಲಿರುವ ಸವಾಯಿ ನಾಲಾ, ಸೈಯದ್ನಾ ಬೇಲಾಲ್ ಹಾಗೂ ಎಲ್‌ಒಸಿಯಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಭಿಂಬರ್‌ನಲ್ಲಿರುವ ಬರ್ನಾಲಾ ಕೇಂದ್ರವನ್ನು ನಾಶಪಡಿಸಿರುವುದನ್ನು ವಿಡಿಯೋ ಮೂಲಕ ಭಾರತೀಯ ಸೇನೆ ಹಂಚಿಕೊಂಡಿದೆ.ಇದನ್ನೂ ಓದಿ: 9 ಉಗ್ರ ಅಡಗು ತಾಣಗಳ ಮಟಾಶ್ – ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು?