Hand Luggage On Flights | ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅನುಮತಿ

ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಕೇವಲ 1 ಬ್ಯಾಗ್‌ (Hand Luggage) ಮಾತ್ರ ಕ್ಯಾಬಿನ್‌ (Cabin) ಒಳಗೆ ಕೊಂಡೊಯ್ಯಬಹುದು.

ಆ ಬ್ಯಾಗ್‌ 7 ಕೆ.ಜಿ. ಮೀರಿರಬಾರದು. ಅಲ್ಲದೆ ಬ್ಯಾಗ್‌ 115 ಸೆಂ.ಮೀ.ಗಿಂತ ಹೆಚ್ಚಿರಬಾರದು ಎಂದು ನಾಗರಿಕ ವಿಮಾನ ಯಾನ ಭದ್ರತಾ ಬ್ಯೂರೋ (BCAS) ಹೇಳಿದೆ.

ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ BCAS ಮತ್ತು ವಿಮಾನ ನಿಲ್ದಾಣದ ಭದ್ರತೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಹೊಸ ಹ್ಯಾಂಡ್ ಬ್ಯಾಗೇಜ್ ನೀತಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದೆ. ಇದನ್ನೂ ಓದಿ: ಕೋಲಾರದ ರಾಜಕೀಯ ವ್ಯಕ್ತಿಯಿಂದ ಥಾರ್‌ ಗಿಫ್ಟ್‌ – ʼಮೈಸೂರ್‌ಪಾಕ್‌ʼ ಖೆಡ್ಡಾಕ್ಕೆ ಕೆಡವಲು ಶ್ವೇತಾ ಪ್ಲ್ಯಾನ್‌!

 

ಹೊಸ BCAS ಹ್ಯಾಂಡ್ ಬ್ಯಾಗೇಜ್ ನೀತಿಯ ಪ್ರಕಾರ ಪ್ರಯಾಣಿಕರು ಈಗ ವಿಮಾನದೊಳಗೆ ಕೇವಲ ಒಂದು ಬ್ಯಾಗ್‌ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಈ ನಿಯಮ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಪ್ರಯಾಣಿಕರಿಗೆ  ಅನ್ವಯವಾಗುತ್ತದೆ.

ಫ‌ಸ್ಟ್‌ ಅಥವಾ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವವರು 10 ಕೆ.ಜಿ. ವರೆಗೆ ಕೊಂಡೊಯ್ಯಬಹುದು. ಈ ಹೊಸ ನಿಯಮ ಈ ವರ್ಷ ಮೇ 2 ಕ್ಕಿಂತ ಮೊದಲ ಟಿಕೆಟ್‌ ಬುಕ್‌ ಮಾಡಿದವರಿಗೆ ಅನ್ವಯವಾಗುವುದಿಲ್ಲ.

ಮೇ 2ಕ್ಕಿಂತ ಮೊದಲು ಬುಕ್‌ ಮಾಡಿದ ಎಕಾನಮಿ ಪ್ರಯಾಣಿಕರು 8 ಕೆಜಿ, ಪ್ರೀಮಿಯಂ ಎಕಾನಮಿ ಪ್ರಯಾಣಿಕರು 10 ಕೆಜಿ ಮತ್ತು ಬಿಸಿನೆಸ್‌ ಕ್ಲಾಸ್‌ನ ಪ್ರಯಾಣಿಕರು 12 ಕೆಜಿ ತೂಕದ ಬ್ಯಾಗ್‌ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ.