ಶಬರಿಮಲೆಗೆ ಬಂದ 7,300 ಜನರಲ್ಲಿ 200 ಮಂದಿ ಮಾತ್ರ ಭಕ್ತರು!

ತಿರುವನಂತಪುರಂ: ಅಯ್ಯಪ್ಪನ ದರ್ಶನಕ್ಕಾಗಿ ಸೋಮವಾರ ಹಾಗೂ ಮಂಗಳವಾರ ಶಬರಿಮಲೆಗೆ 7,300 ಜನ ಆಗಮಿಸಿದ್ದರು. ಆದರೆ ಅವರಲ್ಲಿ 200 ಜನ ಮಾತ್ರ ನಿಜವಾದ ಭಕ್ತರು ಎನ್ನುವುದನ್ನು ಕೇರಳ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಗೆ ಸೇರಿದ 7 ಸಾವಿರ ಜನರು ಶಬರಿಮಲೆಗೆ ಬಂದಿದ್ದರು. ಉಳಿದಂತೆ 200 ಜನ ಮಾತ್ರ ನಿಜವಾದ ಭಕ್ತರಾಗಿದ್ದಾರೆ ಎಂದು ಪೊಲೀಸರು ಖಚಿತ ಪಡಿಸಿಕೊಂಡಿದ್ದಾರಂತೆ.

ಅಯ್ಯಪ್ಪನಿಗೆ ‘ಶ್ರೀ ಚಿತಿರ ಅಟ್ಟಾ ತಿರುನಾಳ್’ ವಿಶೇಷ ಪೂಜೆ ನಿಮಿತ್ತ ಸೋಮವಾರ ಮತ್ತು ಮಂಗಳವಾರ ದೇಗುಲದ ಬಾಗಿಲು ತೆರೆಯಲಾಗಿತ್ತು. ಹೀಗಾಗಿ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದರು. ಈ ಬಾರಿಯೂ ಪ್ರತಿಭಟನೆ ಹಾಗೂ ಯಾವುದೇ ಅವಘಡ ಸಂಭವಿಸಬಾರದು ಅಂತಾ ಕೇರಳ ಪೊಲೀಸ್ 100 ಮಹಿಳಾ ಸಿಬ್ಬಂದಿ ಸೇರಿದಂತೆ 1,500 ಜನ ಪೊಲೀಸರನ್ನು ನಿಯೋಜಿಸಿತ್ತು. ಹೊರ ರಾಜ್ಯದಿಂದ ಶಬರಿಮಲೆ ಬರುವ ಭಕ್ತರು ಪರವಾನಿಗೆ ಪತ್ರ ಪಡೆಯಬೇಕು ಎಂದು ಪೊಲೀಸರು ತಿಳಿಸಿದ್ದರು.

ಕೇರಳ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಭದ್ರತೆ ಒದಗಿಸಿತ್ತು. ಅಷ್ಟೇ ಅಲ್ಲದೆ ಶಬರಿಮಲೆಯ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದರನ್ನು ಗುರುತಿಸಲು ಫೇಸ್ ರೆಕಗ್ನೈಸ್ ಸಾಫ್ಟ್‍ವೇರ್ ಬಳಕೆ ಮಾಡಲಾಗಿತ್ತು. ಹೀಗಾಗಿ ಶಬರಿಮಲೆಗೆ ಬಂದ ಭಕ್ತರಲ್ಲಿ 7 ಸಾವಿರ ಜನ ಮಹಿಳೆಯರ ಪ್ರವೇಶ ವಿರೋಧಿಸಿ ಹೋರಾಟ ನಡೆಸಿದ್ದ ಸಂಘಟನೆಗೆ ಸೇರಿದವರು ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *