ಮೊಬೈಲ್-ಬೆಳ್ಳಿ ವಿಗ್ರಹ ಬರುತ್ತೆಂದು ಕಾಯ್ತಿದ್ದ ರೈತರಿಗೆ ಶಾಕ್

ದಾವಣಗೆರೆ: ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡಿ ರೈತರಿಬ್ಬರು ಮೋಸ ಹೋಗಿರುವ ಘಟನೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಡ ರೈತರಾದ ಪ್ರಕಾಶ್ ಮತ್ತು ಸನಾವುಲ್ಲಾ ಮೋಸ ಹೋದವರಾಗಿದ್ದು, ಒಂದು ವಾರದ ಹಿಂದೆ ಸಾಯಿ ಮಾರ್ಕೆಟಿಂಗ್ ಹೆಸರಲ್ಲಿ ಪ್ರಕಾಶ್ ಮೊಬೈಲ್‍ಗೆ ಫೋನ್ ಬಂದಿತ್ತು. ಲಕ್ಕಿ ಡ್ರಾ ಮೂಲಕ ನಿಮಗೆ ಆಫರ್ ಬಂದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಿಮಗೆ ಉಚಿತವಾಗಿ ನೀಡುವುದಾಗಿ ತಿಳಿಸಿದ್ದರು. ಅಲ್ಲದೆ ನಾವು ಕೊಡುವ ಗಿಫ್ಟ್ ನಲ್ಲಿ 15 ಸಾವಿರ ಮೌಲ್ಯದ ಮೊಬೈಲ್ ಹಾಗೂ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಬೆಳ್ಳಿ ವಿಗ್ರಹ ನೀಡುವುದಾಗಿ ಹೇಳಿ ನಂಬಿಸಿದ್ದರು. ಆದರೆ ನಾವು ಅದನ್ನು ಪೋಸ್ಟ್ ಮುಖಾಂತರ ನಿಮಗೆ ನೀಡುವುದಾಗಿ ತಿಳಿಸಿದ್ದರು.

ಪೋಸ್ಟ್ ಮುಖಾಂತರ ಗಿಫ್ಟ್ ಬರುತ್ತೆ ಎಂದು ಆಸೆಯಿಂದ ಕಾಯುತ್ತಿದ್ದ ರೈತರಿಗೆ ಶುಕ್ರವಾರ ಪಾರ್ಸಲ್ ಬಂದಿದೆ. ಆಗ ರೈತರು 1,600 ಕಟ್ಟಿ ಪಾರ್ಸಲ್ ತೆಗೆದುಕೊಂಡಿದ್ದಾರೆ. ಆದರೆ ಪಾರ್ಸಲ್ ತೆಗೆದು ನೋಡಿದ್ರೆ ಅದರಲ್ಲಿ ಕೇವಲ ಒಂದು ಬಾಕ್ಸ್ ಸ್ವೀಟ್ ಹಾಗೂ ಹತ್ತು ರೂ. ಬೆಲೆ ಬಾಳುವ ವಿಗ್ರಹ ಇತ್ತು. ಇದನ್ನು ನೋಡಿ ರೈತರು ದಂಗಾಗಿದ್ದಾರೆ. ಅಲ್ಲದೆ ಪೋಸ್ಟ್ ಗೆ ಕಟ್ಟಿದ್ದ 1,600 ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ತಕ್ಷಣ ರೈತರು ಮತ್ತೆ ಅದೇ ನಂಬರಿಗೆ ಫೋನ್ ಮಾಡಿದ್ದಾರೆ. ಆದರೆ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *