ಬೆಂಗಳೂರು: ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ಕಂಪನಿಯನ್ನು ಒನ್ ಪ್ಲಸ್ ಕಂಪನಿ ಟ್ರೋಲ್ ಮಾಡಿದೆ.
ಆಪಲ್ ಕಂಪನಿಯ ವಾಯ್ಸ್ ಅಸಿಸ್ಟೆಂಟ್ ಸಿರಿ ಹೆಸರನ್ನು ಬಳಸಿಕೊಂಡು ಒನ್ ಪ್ಲಸ್ ಇಂಡಿಯಾ ಕಾಲೆಳೆದಿದೆ. ಹೇ ಸಿರಿ, ಭಾರತದ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಪೈಕಿ ನಂಬರ್ ಒನ್ ಯಾವುದು ಎಂದು ಪ್ರಶ್ನಿಸಿದೆ. ಈ ಟ್ವೀಟ್ ಗೆ iDare you ಯೂ ಎಂದು ಬರೆದುಕೊಂಡು ಟ್ವೀಟ್ ಮಾಡಿದೆ.
iDare you pic.twitter.com/iSstVVv0aI
— OnePlus India (@OnePlus_IN) January 30, 2019
ಈ ಟ್ವೀಟ್ ಗೆ ಪೂರಕವಾಗಿ ಮತ್ತೊಂದು ಟ್ವೀಟ್ ಮಾಡಿ, ಒನ್ ಪ್ಲಸ್ ಫೋನ್ ಸಿರಿಯನ್ನು ಬೆಂಬಲಿಸುವುದಿಲ್ಲ, ಗೂಗಲ್ ಅಸಿಸ್ಟೆಂಟ್ ಬೆಂಬಲಿಸುತ್ತದೆ ಎಂದು ಹೇಳಿದೆ.

ಸ್ಮಾರ್ಟ್ ಫೋನ್ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ 2018ರ ಮಾರುಕಟ್ಟೆಯ ವರದಿಯ ಪ್ರಕಾರ 30 ರಿಂದ 40 ಸಾವಿರ ರೂ. ಒಳಗಿನ ಫೋನ್ ಗಳ ಪೈಕಿ ಒನ್ ಪ್ಲಸ್ 6 ಮತ್ತು ಒನ್ ಪ್ಲಸ್ 6 ಟಿ ಅತಿ ಹೆಚ್ಚು ಮಾರಾಟವಾಗಿದೆ. ಒಟ್ಟು ಭಾರತದ ಪ್ರೀಮಿಯಂ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಶೇ.34 ಪಾಲನ್ನು ಹೊಂದಿದ್ದರೆ ಒನ್ ಪ್ಲಸ್ ಶೇ.33 ರಷ್ಟು ಪಾಲನ್ನು ಹೊಂದಿದೆ. ಆಪಲ್ ಕಂಪನಿಯ ಐಫೋನ್ ಶೇ.23 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply