ಒಂದು ವಾರ ಫೋನ್ ಬಳಸದೇ ಸುದ್ದಿಯಾದ ಸಮಂತಾ!

ಹೈದರಾಬಾದ್: ಎಲ್ಲೋ ಒಂದು ಸ್ಥಳದಲ್ಲಿ ನೆಟ್‍ವರ್ಕ್ ಇಲ್ಲದೇ ಇದ್ದರೆ ಬಹುತೇಕ ಮಂದಿ ಚಡಪಡಿಸುತ್ತಾರೆ. ಅಂತಹದರಲ್ಲಿ ಒಂದು ವಾರ ಫೋನ್ ಕಾಲ್ ಬಳಸದೇ ಇರಲು ಸಾಧ್ಯವೇ.? ಆದರೆ ಕಾಲಿವುಡ್‍ನ ಪ್ರಸಿದ್ಧ ನಟಿ ಸಮಂತಾ ಈಗ ಒಂದು ವಾರ ಕಾಲ ಫೋನ್ ಬಳಸದೇ ಈಗ ಸುದ್ದಿಯಾಗಿದ್ದಾರೆ.

ಸುಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಂಗಸ್ಥಲಂ 1985 ಚಿತ್ರದ ಶೂಟಿಂಗ್‍ನಲ್ಲಿ ತುಂಬಾ ಬ್ಯುಸಿಯಾಗಿರುವ ಸಮಂತಾ, ಫೋನ್ ಬಳಸದೇ ಒಂದು ವಾರ ನಾನು ಕಳೆದಿದ್ದೆ ಎಂದು ಟ್ವಿಟ್ಟರ್‍ನಲ್ಲಿ ಬರೆದಿದ್ದಾರೆ.

ಬಳಸದ್ದು ಯಾಕೆ?
ಸಮಂತಾ ಮತ್ತು ರಾಮ್ ಚರಣ್ ಅವರು ಆಂಧ್ರ ಪ್ರದೇಶದ ರಾಜಮಂಡ್ರಿ ಸುತ್ತಮುತ್ತ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಮಹತ್ವದ ದೃಶ್ಯಗಳನ್ನು ಚಿತ್ರೀಕರಣಕ್ಕಾಗಿ ರಾಂಚಿಕೋಡವರಾಮ್ ಅರಣ್ಯದ ಬುಡಕಟ್ಟು ಪ್ರದೇಶಕ್ಕೆ ಟೀಂ ಹೋಗಿತ್ತು. ಈ ಅರಣ್ಯ ಪ್ರದೇಶದಲ್ಲಿ ನೆಟ್‍ವರ್ಕ್ ಇಲ್ಲದ ಕಾರಣ ಮೂಲ ಸೌಲಭ್ಯಗಳಿಗೆ ಸಹ ಕೊರತೆ ಇತ್ತು. ಈ ಕಾರಣಕ್ಕಾಗಿ ಸಮಂತಾ ಫೋನ್ ಬಳಕೆ ಮಾಡಲಿಲ್ಲ.

ಗೋದಾವರಿ ತಟದಲ್ಲಿ ಪ್ರಕೃತಿಯನ್ನು ಸವಿಯುತ್ತಾ ಕುಳಿತಿರುವ ಫೋಟೋವೊಂದನ್ನು ಸಮಂತಾ ಅಪ್ಲೋಡ್ ಮಾಡಿದ್ದಾರೆ. ಹಾಗೆ ಫೋನ್ ಇಲ್ಲದೆ ಒಂದು ವಾರ ಕಳಿದಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ.

https://twitter.com/Samanthaprabhu2/status/879201080139104256?ref_src=twsrc%5Etfw&ref_url=http%3A%2F%2Fvijaykarnataka.indiatimes.com%2Fentertainment%2Fbollywood%2Fthis-actress-spent-a-week-without-a-phone%2Farticleshow%2F59333029.cms

 

Comments

Leave a Reply

Your email address will not be published. Required fields are marked *