-ಒಂದೇ ಗಂಟೆಯಲ್ಲಿ ಎರಡು ಅಪಘಾತ
ಬೆಂಗಳೂರು: ಒಂದೇ ರಾತ್ರಿ, ಒಂದೇ ಮುಖ್ಯ ರಸ್ತೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಗರದ ಮೈಸೂರು ರಸ್ತೆಯಲ್ಲಿ ನಡೆದಿವೆ.
ಶುಕ್ರವಾರ ರಾತ್ರಿ 25 ವರ್ಷದ ಯುವಕನೋರ್ವ ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣದ ಬಳಿ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಲಾರಿ ನೇರವಾಗಿ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಕೆಳಗೆ ಬಿದ್ದಿದ್ದು, ಲಾರಿ ಆತನ ಮೇಲೆಯೇ ಹರಿದ ಪರಿಣಾಮ ತಲೆ ಛಿದ್ರ ಛಿದ್ರವಾಗಿದೆ. ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಯುವಕನ ಗುರುತು ಪತ್ತೆಯಾಗಿಲ್ಲ.
ಅದೇ ರಸ್ತೆಯ ಮತ್ತೊಂದು ಕಡೆ ಇಂಡಿಕಾ ಕಾರು ಪಲ್ಟಿಯಾಗಿದೆ. ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರ್ ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅದೃಷ್ಠವಶಾತ್ ಕಾರ್ ನಲ್ಲಿದ್ದ ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ-ಪುಟ್ಟ ಗಾಯಗಳಾಗಿವೆ.
ಈ ಎರಡು ಅಪಘಾತಗಳ ಕುರಿತು ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply