ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್

ಬೆಂಗಳೂರು: ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಎಂದು ಬರೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್ ಮಾಡಿದ್ದು, ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಹೌದು. ಇಂದು ಬೆಳಗ್ಗೆ 6.19ಕ್ಕೆ ದರ್ಶನ್ ಮಾಡಿರುವ ಟ್ವೀಟ್ ಸ್ಯಾಂಡಲ್‍ವುಡ್‍ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಅಲ್ಲದೆ ಯಾವ ಸೆಲೆಬ್ರಿಟಿಗೆ ಯಾರು ಚಾಲೆಂಜ್ ಹಾಕುತ್ತಾರೆ? ದರ್ಶನ್ ಅವರೇ ಬೇರೆ ನಟರಿಗೆ ಚಾಲೆಂಜ್ ಮಾಡಲಿದ್ದಾರಾ? ಅಥವಾ ಬೇರೆಯವರ ಚಾಲೆಂಜ್‍ಯನ್ನು ದಾಸ ಸ್ವಾಗತಿಸಲಿದ್ದಾರಾ? ಎನ್ನುವ ಹತ್ತಾರು ಪ್ರಶ್ನೆಗಳು ಹುಟ್ಟುಕೊಂಡಿದ್ದು, ಬೆಳ್ಳಂಬೆಳಗ್ಗೆ ಏನಪ್ಪಾ ಈ ಚಾಲೆಂಜ್? ಅಂತ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟುಕೊಳ್ಳುವ ಹಾಗಾಗಿದೆ.

ಮಧ್ಯಾಹ್ನ ಫೇಸ್‍ಬುಕ್ ಲೈವ್ ಬರುತ್ತೇನೆ. ಆಗ ಎಲ್ಲಾನೂ ಹೇಳುತ್ತೇನೆ ಎಂದು ಡಿ ಬಾಸ್ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಯಾರ ಬಗ್ಗೆ ದರ್ಶನ್ ಟ್ವೀಟ್ ಮಾಡಿದ್ದಾರೆ? ಏನಿದು ವಿಷಯ ಎಂದು ತಿಳಿಯಲು ಎಲ್ಲರು ಮಧ್ಯಾಹ್ನದ ವರೆಗೂ ಕಾಯಲೇಬೇಕು.

ಟ್ವೀಟ್‍ನಲ್ಲಿ ಏನಿದೆ?
ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್‍ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್ ಎಂದು ಬರೆದು ಡಿ ಬಾಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

ದರ್ಶನ್ ತಮ್ಮ ಕುರುಕ್ಷೇತ್ರ ಸಿನಿಮಾ ಕುರಿತು ಚಾಲೆಂಜ್ ಹಾಕುತ್ತಾರಾ ಅಥವಾ ಬೇರೆ ವಿಚಾರದ ಬಗ್ಗೆ ಚಾಲೆಂಜ್ ಹಾಕುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

ಸೋಮವಾರ ದರ್ಶನ್, ಕುರುಕ್ಷೇತ್ರ ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನಕಾರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೋಗಳನ್ನು ಪಾಸ್ ಗಳ ಮೇಲೆ ಪ್ರಿಂಟ್ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ ಎಂದು ಬರೆದು ಟ್ವೀಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *