ಸಿನಿ ಶುಕ್ರವಾರ ‘ವೆಡ್ಡಿಂಗ್ ಗಿಫ್ಟ್’ ಚಿತ್ರದಿಂದ ಪ್ರೇಕ್ಷಕರಿಗೆ ಡ್ಯುಯೆಟ್ ಸಾಂಗ್ ಗಿಫ್ಟ್

ಕೆಲವು ಸಿನಿಮಾಗಳ ಟೈಟಲ್‍ಗಳೇ ಸಿನಿಮಾದತ್ತ ವಿಶೇಷ ಗಮನ ಹರಿಸುವಂತೆ ಮಾಡುತ್ತವೆ. ಅದರ ಅಪ್ಡೇಟ್‍ಗಳನ್ನು ನೋಡುವಂತೆ ಮಾಡುತ್ತೆ. ಅಂತಹ ಸಿನಿಮಾಗಳ ಪೈಕಿ ‘ವೆಡ್ಡಿಂಗ್ ಗಿಫ್ಟ್’ ಕೂಡ ಒಂದು. ವಿಕ್ರಂ ಪ್ರಭು ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ಮಾಣ ಸಾಹಸಕ್ಕೂ ಇಳಿದಿರುವ ಚಿತ್ರ ‘ವೆಡ್ಡಿಂಗ್ ಗಿಫ್ಟ್’. ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದ ಚಿತ್ರೀಕರಣ ಮುಗಿಸಿ ಒಂದೊಂದೇ ಸ್ಯಾಂಪಲ್‍ಗಳ ಮೂಲಕ ಎಲ್ಲರ ಚಿತ್ತ ಸೆಳೆಯುತ್ತಿದೆ.

‘ಮೊದಲ ಪ್ರೀತಿಯ ಪಯಣ’ ಹಾಡಿನ ಬಿಡುಗಡೆಯಾದ ಮೇಲೆ ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಬಗ್ಗೆ ಗಾಂಧೀನಗರದಲ್ಲಿ ಟಾಕ್ ಜೋರಾಗಿದೆ. ಸಾಂಗ್, ಕ್ವಾಲಿಟಿ, ಮ್ಯೂಸಿಕ್, ಮೇಕಿಂಗ್ ಎಲ್ಲದರಲ್ಲೂ ನೋಡುಗರ ಮನಸೂರೆ ಮಾಡಿದೆ. ಇದೀಗ ಮೊದಲ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಬಂದ ಮೇಲೆ ಚಿತ್ರದ ಬಹುನಿರೀಕ್ಷಿತ ಡ್ಯುಯೆಟ್ ಸಾಂಗ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಸವಿ ಇರುವ ಈ ಹಾಡು ಇದೇ ಸಿನಿ ಶುಕ್ರವಾರ ರಿಲೀಸ್ ಆಗುತ್ತಿದೆ. ಬಾಲಚಂದ್ರ ಪ್ರಭು ಮ್ಯೂಸಿಕ್ ಮೊದಲ ಹಾಡಿನಲ್ಲೇ ಕಮಾಲ್ ಮಾಡಿದೆ. ಇದೀಗ ಎರಡನೇ ಹಾಡು ಬಿಡುಗಡೆಯಾಗುತ್ತಿದ್ದು, ನಿರೀಕ್ಷೆ ಕೂಡ ಹೆಚ್ಚಿಸಿದೆ. ಇದನ್ನೂ ಓದಿ: ಮದುವೆ, ಪಾರ್ಟಿ ಸಮಾರಂಭಕ್ಕೆ ಗನ್ ನಿಷೇಧ

‘ವೆಡ್ಡಿಂಗ್ ಗಿಫ್ಟ್’ ಥ್ರಿಲ್ಲರ್ ಜಾನರ್ ಸಿನಿಮಾ. ಹೆಣ್ಣುಮಕ್ಕಳು ಕಾನೂನನ್ನೇ ಅಸ್ತ್ರವಾಗಿಸಿಕೊಂಡು ಗಂಡು ಸಂತತಿಯನ್ನು ವಿನಾ ಕಾರಣ ಕಷ್ಟದ ಕಮರಿಗೆ ತಳ್ಳುತ್ತಿದ್ದಾರೆ. ಮೂಲ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂಥಾ ಸೂಕ್ಷ್ಮ ಎಳೆ ಮತ್ತು ಮನೋರಂಜನೆಯ ಎಲಿಮೆಂಟುಗಳೊಂದಿಗೆ ಚಿತ್ರ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ನಿಶಾನ್, ಸೋನುಗೌಡ ನಾಯಕ ಹಾಗೂ ನಾಯಕಿ.

ನಟನೆಯಿಂದ ದೂರ ಉಳಿದಿದ್ದ ಪ್ರೇಮ ಈ ಚಿತ್ರದ ಮೂಲಕ ಮತ್ತೆ ಕಂಬ್ಯಾಕ್ ಮಾಡಿರೋದು ‘ವೆಡ್ಡಿಂಗ್ ಗಿಫ್ಟ್’ ವಿಶೇಷತೆಗಳಲ್ಲೊಂದು. ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ತಾರಾಬಳಗವನ್ನು ಈ ಸಿನಿಮಾ ಹೊಂದಿದೆ. ಉದಯ್ ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಇದನ್ನೂ ಓದಿ: ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ

Comments

Leave a Reply

Your email address will not be published. Required fields are marked *