10 ವರ್ಷದ ಹಿಂದೆ ಈ ದಿನ ಟಿ-20 ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು ಟೀಂ ಇಂಡಿಯಾ

ಬೆಂಗಳೂರು: ಪ್ರತೀ ವರ್ಷ ಸೆಪ್ಟೆಂಬರ್ 24 ಬಂತೆಂದರೆ ಭಾರತೀಯರಲ್ಲಿ ಎಲ್ಲಿಲ್ಲದ ಸಂತಸ. ಕಾರಣ 2007ರ ಐಸಿಸಿ ಟಿ20 ಫೈನಲ್ ಪಂದ್ಯ ಗೆದ್ದು ವಿಶ್ವಕಪ್ ಎತ್ತಿಹಿಡಿದು ಇಂದಿಗೆ 10 ವರ್ಷಗಳಾಗಿದೆ. ಹಾಗಾಗಿ ಭಾರತೀಯರಿಗೆ ಮೊದಲ ಟಿ20 ವಿಶ್ವಕಪ್ ಗೆದ್ದ ದಿನವಾದ್ದರಿಂದ ಯಾವೊಬ್ಬ ಕ್ರಿಕೆಟ್ ಅಭಿಮಾನಿಯೂ ಸೆ.24ನ್ನು ನೆನೆಯದೇ ಇರಲಾರ.

ಹೌದು. ದಕ್ಷಿಣ ಆಫ್ರಿಕಾ ಜೊಹಾನ್ಸ್ ಬರ್ಗ್‍ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಗಿದ್ದವು. ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಗೆದ್ದು ಬೀಗಿ ಇತಿಹಾಸ ಸೃಷ್ಟಿ ಮಾಡಿತ್ತು. ಈ ಮೂಲಕ ಮೊದಲ ಟಿ-20 ಟೂರ್ನಿಯಲ್ಲಿ ವಿಶ್ವಕಪ್ ಜಯಿಸಿದ ಹೆಗ್ಗಳಿಕಿಗೆ ಧೋನಿ ಪಾತ್ರರಾದರು.

ಫೈನಲ್‍ನಲ್ಲಿ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪಂದ್ಯವನ್ನು ನೋಡಲು ಈಡೀ ವಿಶ್ವವೇ ಕಾತುರದಿಂದ ನೋಡುತ್ತಿತ್ತು. ಅಲ್ಲದೇ ಮೈದಾನದಲ್ಲಿ ಎರಡು ದೇಶದ ಅಭಿಮಾನಿಗಳು ಕಿಕ್ಕಿರಿದು ನೋಡುತ್ತಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಆರಂಭಿಕ ಬ್ಯಾಟ್ಸ್‍ಮನ್‍ಗಳನ್ನಾಗಿ ಗೌತಮ್ ಗಂಭೀರ್ ಮತ್ತು ಯೂಸುಫ್ ಪಠಾಣ್ ಕಣಕ್ಕಿಳಿದು ಕೆಲ ಕಾಲ ಪಾಕ್ ಬೌಲರ್‍ಗಳಿಗೆ ಬೆವರಿಳಿಸಿದರು. ಯೂಸುಫ್ ಮೊಹಮ್ಮದ್ ಆಸಿಫ್ ಎಸೆದ ಬೌಲಿಂಗ್‍ನಲ್ಲಿ ಶೊಯಬ್ ಮಲ್ಲಿಕ್‍ಗೆ ಕ್ಯಾಚ್ ನೀಡಿ 15(12 ಎಸೆತ)ರನ್‍ಗಳಿಗೆ ಔಟಾದರು. ನಂತರ ರಾಬಿನ್ ಉತ್ತಪ್ಪ 8 ರನ್‍ಗಳಿಸಿ ಹೊರ ನಡೆದರು. ರೋಹಿತ್ ಶರ್ಮಾ 30(22) ರನ್ ಬಾರಿಸಿದರೆ, ಗೌತಮ್ ಗಂಭೀರ್ 75 ರನ್( 54 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿದ ಪರಿಣಾಮ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157ರನ್ ಪೇರಿಸಿತ್ತು.

ಗುರಿ ಬೆನ್ನತ್ತಿದ ಪಾಕಿಸ್ತಾನ ಆಟಗಾರರು ಮೊದಲಿಗೆ ಮೊಹಮ್ಮದ್ ಹಫೀಸ್ ವಿಕೆಟ್ ಕಳೆದುಕೊಂಡಿತು. ನಂತರ ಇಮ್ರಾನ್ ನಜೀರ್ ಭಾರತದ ಬೌಲರ್‍ಗಳ ಮೇಲೆ ಹಿಡಿತ ಸಾಧಿಸಿ ಬ್ಯಾಟ್ ಮಾಡಿ 33(28 ಎಸೆತ) ರನ್ ಬಾರಿಸಿದರು. ಯೂನಿಸ್ ಖಾನ್ 24(27 ಎಸೆತ)ರನ್ ಬಾರಿಸಿ ಪೆವಿಲಿಯನ್‍ಗೆ ನಡೆದರು. ನಂತರ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಕಣಕ್ಕಿಳಿದು ಭಾರತಕ್ಕೆ ತಲೆ ನೋವಾಗಿ ಪರಿಣಮಿಸಿದರು. ಅತ್ತ ಮಿಸ್ಬಾ ನಿಧಾನಗತಿ ಆಟವಾಡಿ ರನ್ ಏರಿಸುವತ್ತ ಮುನ್ನಡೆಯುತ್ತಿದ್ದರೆ, ಇತ್ತ ಬ್ಯಾಟ್ಸ್ ಮನ್ ಗಳು ಒಬ್ಬೊಬ್ಬರೇ ಪೆವಿಲಿಯನ್ ಹಾದಿ ಹಿಡಿಯುತ್ತಿದ್ದರು.

ಕೊನೆಯ ಓವರ್‍ನಲ್ಲಿ ಸಿಕ್ತು ಜಯ:
ಕೊನೆಯ ಓವರ್‍ನಲ್ಲಿ ಧೋನಿ ಜೋಗಿಂದರ್ ಶರ್ಮಾ ಕೈಗೆ ಚೆಂಡಿಟ್ಟು ಬೌಲ್ ಮಾಡುವಂತೆ ಹೇಳಿದರು. ಪಾಕಿಸ್ತಾನಕ್ಕೆ ಕೊನೆಯ ಓವರ್‍ನಲ್ಲಿ 13 ರನ್ ಬೇಕಿತ್ತು. ಬೌಲಿಂಗ್ ದಾಳಿಗಿಳಿದ ಜೋಗಿಂದರ್‍ಗೆ ಮಿಸ್ಬಾ ಮೊದಲ ಬಾಲ್ ವೈಡ್ ಎಸೆದರು. ನಂತರದ ಬಾಲ್ ಮಿಸ್ಬಾ ಸಿಕ್ಸ್ ಬಾರಿಸಿ ರನ್ ಅಂತರ ಕಡಿಮೆ ಮಾಡಿದರು. 19.2ನೇ ಬಾಲ್‍ನಲ್ಲಿ ಮಿಸ್ಬಾ ರಿವರ್ಸ್ ಬ್ಯಾಟ್ ಮಾಡಲು ಹೋಗಿ ಹಿಂದೆ ಇದ್ದ ಶ್ರೀಶಾಂತ್‍ಗೆ ಕ್ಯಾಚ್ ನೀಡಿ ಔಟಾದರು.

ಇದರಿಂದ ಪಾಕಿಸ್ತಾನ 152ರನ್‍ಗೆ ಆಲೌಟ್ ಆಗಿ ಭಾರತಕ್ಕೆ 5 ರನ್‍ಗಳ ಜಯ ಸಾಧಿಸಿ 2007 ವಿಶ್ವಕಪ್ ಎತ್ತಿ ಹಿಡಿಯಿತು. ಅಲ್ಲದೇ ಭಾರತದ ಪರ ಆರ್.ಪಿ.ಸಿಂಗ್ ಹಾಗೂ ಇರ್ಫಾನ್ ಪಠಾಣ್ ತಲಾ 3, ಜೋಗಿಂದರ್ ಶರ್ಮಾಗೆ 2, ಶ್ರೀಶಾಂತ್ 1 ವಿಕೆಟ್ ಪಡೆದು ಮಿಂಚಿದ್ದರು.  ಅದರಲ್ಲೂ ಫೈನಲ್ ಪಂದ್ಯ ಗೆಲ್ಲಲು ಕಾರಣರಾದ ಜೋಗಿಂದರ್ ಶರ್ಮಾ ಆ ಪಂದ್ಯದ ಹೀರೋ ಆಗಿ ಹೊರ ಹೊಮ್ಮಿದರು.

https://www.youtube.com/watch?v=GY9fHrJf19I

ಹೊಸ ನಾಯಕರಾಗಿ ಟಿ20 ವಿಶ್ವಕಪ್ ತಂದುಕೊಟ್ಟಿದ್ದ ಧೋನಿ ಅಂದಿನಿಂದ ಇಲ್ಲಿಯವರೆಗೂ ಲಕ್ಕಿ ಕ್ಯಾಪ್ಟನ್ ಎಂದೇ ಹೆಸರುವಾಸಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ ನಂ.1 ಸ್ಥಾನಕ್ಕೇರಿಸಿ, 2011ರ ವಿಶ್ವಕಪ್‍ನ್ನೂ ಸಹ ತಂದು ಕೊಟ್ಟರು. ಜೊತೆಗೆ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಭಾರತಕ್ಕೆ ಕೊಡುಗೆಯಾಗಿ ನೀಡಿದರು.

https://www.youtube.com/watch?v=fXCxMWOdkBM

Comments

Leave a Reply

Your email address will not be published. Required fields are marked *